ಅರಳು ಪ್ರತಿಭೆ ದೀಕ್ಷಾ

ಈ ಸುದ್ದಿಯನ್ನು ಶೇರ್ ಮಾಡಿ

ಕಲೆಯನ್ನೇ ತನ್ನ ಜೀವನವೆಂದು ಭಾವಿಸಿ ಮತ್ತು ಅದನ್ನು ಸಮಾಜಕ್ಕೆ ಪರಿಚಯಿಸಲು ಹೂರಟಿರುವ ಬ್ರಹ್ಮಾವರದ ಹುಡುಗಿ ದೀಕ್ಷಾ,ಮುಂಡ್ಕಿನಜೆಡ್ಡು ಆರೂರು, ಮೇಲಡ್ಪು ಊರಿನ ಚುರುಕಾದ ಹುಡುಗಿ, ಕಲಾಸರಸ್ವತಿ ದೀಕ್ಷಾ. ಈಕೆ ತಂದೆ ವಿಠ್ಠಲ್ ಪೂಜಾರಿ ತಾಯಿ ಶುಭ ದಂಪತಿಗಳ ಮುದ್ದು ಮಗಳು. ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ದೀಕ್ಷಾರವರು ಈಗ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ.

ಓದಿನಂತೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸದಾ ಮುಂದು.
ಇವಳು ಶಾಸ್ತ್ರೀಯ ಸಂಗೀತವನ್ನು ತನ್ನ ಗುರುಗಳಾದ ಶ್ರೀಮತಿ ಸುಮಾ ಐತಾಳ್ ಇವರಲ್ಲಿ 6 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದಾಳೆ ಹಾಗೆ ಸೀನಿಯರ್ ಪರೀಕ್ಷೆ ತಯಾರಿ ನಡೆಸಿ ಅದರ ಜೊತೆಗೆ ಜಾನಪದ ಕಲೆ, ಸ್ಪರ್ಧೆಗಳಲ್ಲಿ ಹಲವಾರು ಕಡೆ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿದ್ದಾಳೆ. ಇದರೊಂದಿಗೆ ವೀಣಾವಾದನ ಅಭ್ಯಾಸ ಮಾಡುತ್ತಿದ್ದು, ಆ ಕಲಾ ಪ್ರದರ್ಶನವನ್ನು ಹಲವಾರು ಕಡೆ ನೀಡಿರುತ್ತಾಳೆ.

ದೀಕ್ಷಾ ಬರೀ ಸಂಗೀತ ಮಾತ್ರವಲ್ಲ ಭರತನಾಟ್ಯವನ್ನೂ ತಮ್ಮ ಒಂದನೆಯ ತರಗತಿಯಿಂದ ಆರಂಭಿಸಿ, ತನ್ನ ಗುರುಗಳಾದ ಶ್ರೀಮತಿ ವಿಧುಷಿ ಶೃತಿ ರಾಘವೇಂದ್ರ ಭಟ್ ಇವರಲ್ಲಿ 7 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದು ಜೂನಿಯರ್ ಪರೀಕ್ಷೇಯನ್ನು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾಳೆ. ಈಕೆ ಹಲವು ನೃತ್ಯ ಪ್ರದರ್ಶಗಳನ್ನು ತನ್ನ ಗುರುಗಳ ಆಶೀರ್ವಾದದಿಂದ ಹಲವಾರು ಕಡೆಗಳಲ್ಲಿ ನೀಡಿ .ಜನಮನ್ನಣೆ ಗಳಿಸಿದ್ದಾಳೆ.

Loading...

ನಮ್ಮ ರಾಜ್ಯದ ನೆಚ್ಚಿನ, ಕರಾವಳಿ ಭಾಗದಲ್ಲಿನ ಪ್ರಸಿದ್ದ ಯಕ್ಷಗಾನ ಕಲೆಯನ್ನು ಶ್ರೀಮತಿ ಶಶಿಕಲಾ ಪ್ರಭು ಚೇರ್ಕಾಡಿ, ಇವರ ಬಳಿ ಅಭ್ಯಾಸ ಮಾಡುತ್ತಿದ್ದು, ಪಾಶ್ಚಾತ್ಯ ನೃತ್ಯಗಳಲ್ಲಿ ಒಂದಾದ ಹುಲ್ಲ-ಹೂಪ್ ಮತ್ತು ಒಡಿಸ್ಸಿ ನೃತ್ಯವನ್ನೂ ಮಾಡುತ್ತಾಳೆ.ಶಾಲಾ-ಕಾಲೇಜುಗಳಲ್ಲಿ ರಂಗೋಲಿ ಮತ್ತು ಚಿತ್ರಕಲೆಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದಿರುವ ಈಕೆ ಸಂಗೀತ, ನೃತ್ಯ ಹಾಗೂ ವೀಣಾವಾದನ ಮತ್ತು ಇವುಗಳಲ್ಲಿ ವಿಧ್ವತ್ತನ್ನು ಮಾಡಿ ಉತ್ತಮ ಕಲಾಶಿಕ್ಷಕಿಯಾಗಿ, ಕಲೆಯಲ್ಲಿ ಆಸಕ್ತಿ ಹೊಂದಿದ ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಬೇಕೆನ್ನುವುದು ದೀಕ್ಷಾಳ ಅತಿ ದೊಡ್ಡ ಕನಸು.

ಸ್ವಚ್ಚ ಮನಸ್ಸು, ನಿಸ್ವಾರ್ಥ ಹೃದಯಿ ಈ ಹುಡುಗಿ ಮನಶಾಸ್ತ್ರಜ್ಞೆಯಾಗಿ, ಕಲಾಶಿಕ್ಷಕಿಯಾಗಿ, ಸಂಗೀತ ಹಾಗೂ ನೃತ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬುದು ಈಕೆಯ ಗುರಿಯಾಗಿದೆ.ತನ್ನ ತಂದೆ-ತಾಯಿ ಮತ್ತು ಗುರುಗಳ ಹೆಮ್ಮೆಯ ಮತ್ತು ಅಚ್ಚು ಮೆಚ್ಚಿನ ಹುಡುಗಿ ದೀಕ್ಷಾಳ ಜೀವನದಲ್ಲಿನ ಎಲ್ಲಾ ಕನಸುಗಳು ನನಸಾಗಲಿ, ಸಾಧನೆಯ ಹಾದಿಯಲ್ಲಿ ಸದಾ ಮಿನುಗುತ್ತಿರಲಿ ಎಂಬುದು ಎಲ್ಲರ ಆಶಯವಾಗಿದೆ.
ಲೇಖನ /ಚಿತ್ರಕೃಪೆ /ವೀಡಿಯೋ /ಪೂಜಾ ಅಜೇಯ

Leave a Reply

This site uses Akismet to reduce spam. Learn how your comment data is processed.