ಶ್ರೀನಿವಾಸನ ಸ್ಪರ್ದೆಯಿಂದ ಬಿಜೆಪಿಗೆ ವರವಾಗಲಿದೆ ಚಾಮರಾಜನಗರ !!

ಈ ಸುದ್ದಿಯನ್ನು ಶೇರ್ ಮಾಡಿ


ಅಂತೂ 2019 ರ ಲೋಕಸಭಾ ಸಮರಕ್ಕೆ ಮುಹೂರ್ತ ಫಿಕ್ಸ್ ಆಗಿದೆ…ಏಪ್ರಿಲ್ 18 & 23 ರಂದು ಎರಡು ಹಂತಗಳಲ್ಲಿ ಕ್ರಮವಾಗಿ ದಕ್ಷಿಣ ಕರ್ನಾಟಕ,ಉತ್ತರ ಕರ್ನಾಟಕಗಳಲ್ಲಿ ಮತದಾನ ನಡೆಯಲಿದೆ.ಮೇ 23ರಂದು ಫಲಿತಾಂಶ ಹೊರಬೀಳಲಿದೆ.ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿರುವ ಕಾಂಗ್ರೇಸ್ & ಜೆಡಿಎಸ್ ಪಕ್ಷಗಳು ಚುನವಣಾ ಪೂರ್ವ ಮೈತ್ರಿಯನ್ನ ಮಾಡಿಕೊಂಡು ಕಾಂಗ್ರೇಸ್ ಪಕ್ಷಕ್ಕೆ 20 ಕ್ಷೇತ್ರಗಳು,ಜೆಡಿಎಸ್ ಪಕ್ಷಕ್ಕೆ 8 ಕ್ಷೇತ್ರಗಳ ಒಪ್ಪಂದವಾಗಿದೆ.ಕಾಂಗ್ರೇಸ್ ತನ್ನ ಹಾಲಿ ಸಂಸದರ ಕ್ಷೇತ್ರಗಳನ್ನ ತಾನೆ ಉಳಿಸಿಕೊಂಡಿದೆ (ತುಮಕೂರನ್ನ ಬಿಟ್ಟು)

ಹಾಗೇ ವಿಷಯದ ಕಡೆ ಬರುವುದಾದರೆ ಗಡಿ ಜಿಲ್ಲೆ/ಕ್ಷೇತ್ರ ಚಾಮರಾಜನಗರದಲ್ಲಿ ಕಾಂಗ್ರೇಸ್ ತನ್ನ ಹಾಲಿ ಸಂಸದರಾದ ಆರ್ ಧ್ರುವನಾರಾಯಣರಿಗೆ ಟಿಕೆಟ್ ನೀಡೋದು ಬಹುತೇಕ ಖಚಿತ,ಕಳೆದೆರಡು ಬಾರಿ ಗೆದ್ದು ಸಂಸತ್ ಪ್ರವೇಶಿಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಧ್ರುವನಾರಯಣರಿಗೆ ಈ ಬಾರಿ ಶಾಕ್ ಕೊಟ್ಟಿದೆ ಬಿಜೆಪಿ..
ಹೌದು ಹಿಂದೆ ಪರಾಭವಗೊಂಡಿದ್ದ ಅಭ್ಯರ್ಥಿ ಕೃಷ್ಣಮೂರ್ತಿಯವರು ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತೊರೆದು ಕೈ ಹಿಡಿದಿದ್ದರು,ಇದರಿಂದ ಈ ಬಾರಿ ಎಂಪಿ ಟಿಕೆಟ್ ಯಾರಿಗೆ ಕೊಡೋಣ ಅನ್ನುವಾಗ ಸಿಕ್ಕಿದೆ ಐದು ಬಾರಿ ಇದೆ ಕ್ಷೇತ್ರದಿಂದ ಗೆದ್ದಿದ್ದ ಅನುಭವಿ,ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್

ಶ್ರೀನಿವಾಸ್ ಪ್ರಸಾದರವರು ಸ್ಪರ್ದಿಸುವುದು ಬಹುತೇಕ ಖಚಿತವಾಗಿದ್ದು ಅಧಿಕೃತ ಘೋಷಣೆ ಬಾಕಿ ಇದೆ.ಅಷ್ಟಕ್ಕೂ ಪ್ರಸಾದ್ ಸ್ಪರ್ದಿಸಲು ಅವರ ಬೆಂಬಲಿಗರ ಒತ್ತಾಯ ಮತ್ತು ಆಪ್ತರಾದ ಧ್ರುವನಾರಯಣರನ್ನ ಮಣಿಸುವ ಮೂಲಕ ಸಿದ್ದರಾಮಯ್ಯರ ಸೊಕ್ಕು ಮುರಿಯುವ ಉದ್ದೇಶವೇ ಕಾರಣ.ಸ್ಪರ್ದಿಸಿದ ಮಾತ್ರಕ್ಕೆ ಗೆಲ್ಲುತ್ತಾರ ಅದೇಗೆ ಅಂತೀರ ಇಲ್ಲಿದೆ ನೋಡಿ ಸ್ವಾರಸ್ಯಕರ ಅಂಶಗಳು

Loading...

1.ಐದು ಬಾರಿ ಗೆದ್ದಿರುವ ಅನುಭವ ಮತ್ತು ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಮತದಾರರಿಗೆ ಪರಿಚಿತವಾದ ನಾಯಕ,ಹಿಂದೆ ಇದ್ದ ಅಭ್ಯರ್ಥಿ ಜನ ಸಾಮಾನ್ಯರಿಗೆ ಅಷ್ಟರ ಮಟ್ಟಿಗೆ ತಿಳಿದಿರಲಿಲ್ಲ.

2.ಕಳೆದ ಎರಡು ಬಾರಿ ಧ್ರುವನಾರಾಯಣ್ ಗೆಲ್ಲಲು ದೊಡ್ಡ ಕೊಡುಗೆ ಗುಂಡ್ಲುಪೇಟೆಯ ಮಾಜಿ ಸಚಿವ ದಿವಂಗತ ಹೆಚ್ ಎಸ್ ಮಹದೇವಪ್ರಸಾದ್ ಶ್ರಮ ಜೊತೆಗೆ ಹೆಸರು ಮತ್ತು ವರ್ಚಸ್ಸು ಕೆಲಸ ಮಾಡಿತ್ತು ಇಂದು ಆ ಮಹದೇವಪ್ರಸಾದ್ ಧ್ರುವ ಜೊತೆಗಿಲ್ಲ ಇದು ದೊಡ್ಡ ಹಿನ್ನೆಡೆ

3.ಕಳೆದ ಬಾರಿ ಬಿಜೆಪಿ ಕ್ಷೇತ್ರದಲ್ಲಿ ಖಾತೆ ತೆರೆದಿರಲಿಲ್ಲ ಆದರೆ ಈ ಬಾರಿ ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳನ್ನ ಕೈವಶ ಮಾಡಿಕೊಂಡಿದೆ,ಜೊತೆಗೆ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಜನ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿದೆ,ಇದರಿಂದ ಕೇಂದ್ರದ ಕಾರ್ಯಗಳು,ವಿಷಯಗಳನ್ನ ಮತದಾರರಿಗೆ ತಲುಪಿಸುವ ಮಾರ್ಗ ಸುಲಭ

4.ಚಾಮರಾಜನಗರ ವಿಧಾನಸಭಾ ಕ್ಷೇತ್ರ ಮತ್ತು ಹನೂರು ಕ್ಷೇತ್ರಗಳಲ್ಲಿ ಬಿಜೆಪಿ ಅಲ್ಪ ಪ್ರಮಾಣದ ಅಂತರದಲ್ಲಿ ಸೋತಿದೆ ಅಂದರೆ ವೋಟ್ ಗಳಿಕೆಯಲ್ಲಿ ಮಹತ್ತರ ಬೆಳವಣಿಗೆಯಾಗಿದೆ,ಈ ಬಾರಿ ಕೂಡ ಹೆಚ್ಚಿನ ಪ್ರಮಾಣದ ವೋಟ್ ತರುವುದರಲ್ಲಿ ಅನುಮಾನವಿಲ್ಲ

5.ದೇಶದ ಪ್ರಧಾನಿಯವರ ಅಸಂಖ್ಯಾತ ಅಭಿಮಾನದ ಯುವಪಡೆಗಳು ಈ ಬಾರಿ ಸಕ್ರಿಯವಾಗಿವೆ.
ಇವೆಲ್ಲವು ಶ್ರೀನಿವಾಸ್ ಪ್ರಸಾದ್ ಗೆಲುವಿಗೆ ಪೂರಕವಾಗುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಲವಾಗಿದೆ..
-ವಿಜಯ್ ರುದ್ರೇಶ್

Leave a Reply

This site uses Akismet to reduce spam. Learn how your comment data is processed.