ರಾಜ್ಯ ಕಾಂಗ್ರೇಸ್ ನಾಯಕರಿಗಿಂತ ಹೈಕಮಾಂಡಿಗೆ ಮೈತ್ರಿ ಅತ್ಯವಶ್ಯಕವಾಗಿತ್ತು

ಈ ಸುದ್ದಿಯನ್ನು ಶೇರ್ ಮಾಡಿ

2018ರಲ್ಲಿ ಕಾಂಗ್ರೇಸ್ ಜೆಡಿಎಸ್ ಮುಂದೆ ಕೈ ಕಟ್ಟಿ ನಿಲ್ಲಲು ಇದ್ದದು ಒಂದೇ ಕಾರಣ ಅದು 2019ರ ಲೋಕಸಭಾ ಎಲೆಕ್ಷನ್ ಗೆಲ್ಲೋದು ಒಂದ್ ಉದ್ದೇಶ ಆದ್ರೆ ದೊಡ್ಡ ಉದ್ದೇಶ ಎಲೆಕ್ಷನ್ ಖರ್ಚಿಗೆ ಫಂಡ್ ಕೂಡಿಸೋದು.ಯಾಕ್ ಅಂದ್ರೆ ಕಾಂಗ್ರೆಸ್ ಪಾಲಿಗೆ ದೇಶದ ಬಹುತೇಕ ರಾಜ್ಯಗಳ ಬಾಗಿಲು ಮುಚ್ಚಿತ್ತು ಉಳಿದಿದ್ದು ಕರ್ನಾಟಕ ಒಂದೇ,ಇಲ್ಲೂ ಜನ ಐದು ವರ್ಷದ ದುರಾಡಳಿತಕ್ಕೆ ತಕ್ಕ ಶಾಸ್ತಿ ಮಾಡಿದರು.

ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳುವ ಅಲೋಚನೆಗೆ ಅತಂತ್ರವಾಗಿದ್ದ ಫಲಿತಾಂಶವನ್ನ ಉಪಯೋಗಿಸಿಕೊಂಡು ಜೆಡಿಎಸ್ ಮುಂದೆ ಕೈ ಕಟ್ಟಿನಿಂತರು.ಈವಾಗ 2019ರ ಲೋಕಸಭಾ ಎಲೆಕ್ಷನ್ ಸಮಯದಲ್ಲೂ ಚುನಾವಣ ಪೂರ್ವ ಮೈತ್ರಿ ಮಾಡಿಕೊಂಡು ಎದುರಿಸಿದರು..ಎಲೆಕ್ಷನ್ ಮುಗಿದಿದೆ ಈವಾಗ ಒಂದು ವರ್ಷದಿಂದ ಪರಸ್ಪರವಿದ್ದ ಒಳಜಗಳಗಳನ್ನ ಬೀದಿಗೆ ತಂದಿದ್ದಾರೆ ಕಾರಣ ಇಷ್ಟೇ ಎಲೆಕ್ಷನ್ ಮುಗಿದಿದೆ 37 ಗೆದ್ದಿರೋರ ಮುಂದೆ ಐದು ವರ್ಷ ಕೈಕಟ್ಟಿ ಉಪಯೋಗವಿಲ್ಲ ಅಂತ

ಕಾಂಗ್ರೇಸ್ ನಾಯಕರು ಅದರಲ್ಲೂ ಸಿದ್ದರಾಮಯ್ಯ ತಮ್ಮ ದಾಳಗಳನ್ನು ಉರುಳಿಸಲು ಸಜ್ಜಾಗಿದ್ದಾರೆ
1.ಸರ್ಕಾರ ಬೀಳಿಸುವ ತಂತ್ರವನ್ನ ತನ್ನ ಆಪ್ತರಿಂದ ಮಾಡಿಸಿ,ಮುಖ್ಯಮಂತ್ರಿ ಗಾದಿ ತನ್ನತ್ತ ಬರುವಂತೆ ಮಾಡುವುದು
2.ಇಲ್ಲ ಒಂದಷ್ಟು ಜನರನ್ನ ಅಪರೇಷನ್ ಕಮಲದ ಹೆಸರಲ್ಲಿ ತಾವೇ ಡೀಲ್ ಮಾಡಿ,ವಿಪಕ್ಷ ನಾಯಕನಾಗಿ ಕೂರುವುದು
3.ಜೆಡಿಎಸ್ ಮೇಲೆ ಎಲ್ಲ ಆರೋಪ,ರಂಪಗಳನ್ನ ಬೀದಿಗೆ ತಂದು ಸರ್ಕಾರ ವಿಸರ್ಜಿಸಿ ಜನರ ಮುಂದೆ ಹೋಗುವುದು
ಒಟ್ಟಿನಲ್ಲಿ ಸರ್ಕಾರ ಉಳಿಯುವುದು ಬಹುತೇಕ ಅನುಮಾನ ಇದಕ್ಕೆ ಜಾರಕಿಹೊಳಿ ಅವರು ಇವರು ಕಾರಣವಲ್ಲ ,ಇದಕ್ಕೆಲ್ಲ ಸಿದ್ದರಾಮಯ್ಯರೆ ಕಾರಣ
✍ವಿಜಯ್ ರುದ್ರೇಶ್

Loading...

Leave a Reply

This site uses Akismet to reduce spam. Learn how your comment data is processed.