ಶುಕ್ರವಾರ ಶ್ರೀ ಲಕ್ಷ್ಮೀದೇವಿ ನೆನೆಯುತ್ತ ಈ ದಿನ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀ ದುರ್ಗಾ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ ರಘುರಾಮ್ 9741189603ನಿಮ್ಮ ವಿದ್ಯಾಭ್ಯಾಸ ಉದ್ಯೋಗ ವ್ಯಾಪಾರ ಹಣಕಾಸಿನ ಸಮಸ್ಯೆ ಸತಿ ಪತಿ ಕಲಹ ಪ್ರೀತಿ ಪ್ರೇಮ ಕೋರ್ಟ್ ಕೇಸ್ ಕುಟುಂಬ ಕಲಹ ಭೂಮಿ ವಿಚಾರ ಸಂತಾನ ಭಾಗ್ಯ ಆರೋಗ್ಯ ಸಮಸ್ಯೆ ವಶೀಕರಣ ಮಾಟ ಬಾದೆ ಮತ್ತೆ ಹಲವಾರು ಸಮಸ್ಯೆಗಳಿಗೆ ಶ್ರೀ ದುರ್ಗಾದೇವಿ ಶಕ್ತಿ ಪೂಜೆಯಿಂದ ನಿಮ್ಮ ಯಾವುದೇ ಸಮಸ್ಯೆ ಇದ್ದರೂ 1 ದಿನದಲ್ಲಿ ಶಾಶ್ವತ ಪರಿಹಾರ9741189603

ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ
ವಿಕಾರಿನಾಮ ಸಂವತ್ಸರ ಶ್ರಾವಣ ಮಾಸ ಶುಕ್ಲ ಪಕ್ಷ ತಿಥಿ ದಶಮಿ ನಕ್ಷತ್ರ ಅನುರಾಧ

ಮೇಷ:- ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡುವಾಗ ಉದಾಸೀನ ಬೇಡ. ಧಾರ್ಮಿಕ ಕಾರ್ಯಗಳಿಗೆ ದಾನ ಮಾಡುವುದರಿಂದ ಕಷ್ಟಗಳು ದೂರವಾಗುವವು. ಒಳ್ಳೆಯ ಉದ್ಯೋಗಗಳು ನಿಮ್ಮನ್ನು ಹುಡುಕಿ ಬರುವವು. ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಂಭ್ರಮಿಸುವರು. ಸೈಟ್‌, ಮನೆ ಖರೀದಿಸಲು ಸೂಕ್ತ ಸಮಯವಿದು. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಅದೃಷ್ಟ ಸಂಖ್ಯೆ 1

Loading...

ವೃಷಭ:- ಕೋರ್ಟ್‌ ಕೇಸುಗಳು ನಿಮ್ಮ ಪರವಾಗಿ ಆಗುವವು. ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ತಿರುವು ಕಂಡುಬರಲಿದೆ. ಕೆಲವು ನಿರ್ಧಾರಗಳನ್ನು ಧೈರ್ಯದಿಂದ ತೆಗೆದುಕೊಳ್ಳುವಿರಿ. ಇದರಿಂದ ನಿಮ್ಮ ಸಂಗಾತಿಯು ಹರ್ಷ ವ್ಯಕ್ತಪಡಿಸುವರು. ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಅಗತ್ಯ. ಆರ್ಥಿಕ ಬಿಕ್ಕಟ್ಟು ದೂರವಾಗಲಿದೆ. ಅದೃಷ್ಟ ಸಂಖ್ಯೆ 6

ಮಿಥುನ:-ಕದಡಿದ್ದ ಕುಟುಂಬದ ನೆಮ್ಮದಿ ತಿಳಿಗೊಳ್ಳುವುದು. ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಚಿಂತಿಸುವಿರಿ. ಅವರ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯುವುದು. ವ್ಯವಹಾರದಲ್ಲಿ ಅಧಿಕ ಲಾಭ ಬರುವುದು. ದೈವಾನುಗ್ರಹವಿದ್ದು ನೀವು ಹಮ್ಮಿಕೊಂಡ ಕಾರ್ಯಗಳು ಯಶಸ್ಸು ತಂದುಕೊಡುವವು. ಬರಲಿರುವ ಹೆಚ್ಚಿನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಬೇಕೆಂದು ಆಲೋಚಿಸಿ. ಅದೃಷ್ಟ ಸಂಖ್ಯೆ 5

ಕಟಕ:- ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ನಿಮಗೆ ದಕ್ಕಬೇಕಾದಷ್ಟೇ ನಿಮ್ಮ ಕೈ ಸೇರುವುದು. ಶುಭ ಕಾರ್ಯಗಳು ಸುಸೂತ್ರವಾಗಿ ನಡೆಯುವವು. ಪ್ರಮುಖ ನಿರ್ಧಾರಗಳನ್ನು ಸದ್ಯಕ್ಕೆ ಕೈಗೊಳ್ಳಬೇಡಿ. ಆರ್ಥಿಕ ಸಫಲತೆ ನಿಮ್ಮಲ್ಲಿ ಪೂರ್ಣ ಧೈರ್ಯ ತುಂಬುವುದು. ದೂರ ಪ್ರಯಾಣ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಸೋಮವಾರ ಮತ್ತು ಶನಿವಾರ ಉತ್ತಮ ದಿನಗಳು. ಅದೃಷ್ಟ ಸಂಖ್ಯೆ 4

ಸಿಂಹ:- ಸಾಲ ತೀರಿಸುವಿರಿ. ದೈನಂದಿನ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಯವಾಗುವುದಿಲ್ಲ. ಸರ್ಕಾರಿ ನೌಕರರಿಗೆ ಬಿಡುವಿಲ್ಲದ ಕೆಲಸ ಇರಲಿದೆ. ದಂಪತಿಯಲ್ಲಿ ವಿನಾಕಾರಣ ವಿರಸ ತಲೆದೋರುವ ಸಾಧ್ಯತೆ ಇದೆ. ಖಾಸಗಿ ಕಂಪನಿ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಮಗಳಿಗೆ ಸೂಕ್ತ ವರ ದೊರೆಯುವ ಸಾಧ್ಯತೆ ಇದೆ. ಭಾನುವಾರ, ಸೋಮವಾರ ಉತ್ತಮ ದಿನಗಳು. ಅದೃಷ್ಟ ಸಂಖ್ಯೆ 2

ಕನ್ಯಾ:-ವಿವಾದಗಳು ಇತ್ಯರ್ಥಗೊಂಡು ನೆಮ್ಮದಿ ಕಾಣುವಿರಿ. ನಿಮ್ಮ ಮೇಲಿನ ಬೃಹತ್‌ ಜವಾಬ್ದಾರಿಯನ್ನು ಕಳೆದುಕೊಳ್ಳುವಿರಿ. ಈ ಖುಷಿಯಲ್ಲಿ ಮೂರ್ನಾಲ್ಕು ದಿನ ಪ್ರವಾಸ ಕೈಗೊಳ್ಳಿ. ಮಹಿಳೆಯರು ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ಇರುವುದು ಒಳ್ಳೆಯದು. ನಿಮ್ಮ ಸಹನೆಯೇ ಬಾಂಧವ್ಯ ವೃದ್ಧಿಸಲಿದೆ. ಮಂಗಳವಾರ, ಬುಧವಾರ ಉತ್ತಮ ದಿನಗಳು. ಅದೃಷ್ಟ ಸಂಖ್ಯೆ 7

ತುಲಾ:- ನಿಮ್ಮ ಮಾತಿನಲ್ಲಿ ಡಾಂಭಿಕತೆ ನುಸುಳದಿರಲಿ. ತಾಯಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವಿರಿ. ರಕ್ತ ಸಂಬಂಧಗಳು ಹಾಳಾಗದಂತೆ ನೋಡಿಕೊಳ್ಳಿ. ಅನವಶ್ಯಕ ವ್ಯವಹಾರಗಳಿಂದ ದೂರವಿರಿ. ರಾಜಕೀಯ ಪಕ್ಷ ದಲ್ಲಿ ಉತ್ತಮ ಸ್ಥಾನ ಲಭಿಸುವುದು. ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆದು ತೇರ್ಗಡೆ ಆಗುವರು. ಬುಧವಾರ, ಶುಕ್ರವಾರ ಉತ್ತಮ ದಿನಗಳು. ಅದೃಷ್ಟ ಸಂಖ್ಯೆ 2

ವೃಶ್ಚಿಕ:-ಮಹತ್ತರ ಕಾರ್ಯವೊಂದು ನಿಮ್ಮಿಂದ ಜರುಗಲಿದೆ. ಅದಕ್ಕಾಗಿ ಗೌರವಿಸಲ್ಪಡುವಿರಿ. ಮನೆಯಲ್ಲಿ ಸಣ್ಣಪುಟ್ಟ ವಸ್ತುಗಳು ಕಣ್ಮರೆ ಆಗುವ ಸಾಧ್ಯತೆ ಇದೆ. ವಾರಾಂತ್ಯದಲ್ಲಿ ನೀವು ಮಾಡದಿರುವ ತಪ್ಪಿಗೆ ಶಿಕ್ಷೆ ಅನುಭವಿಸುವಿರಿ ಅಥವಾ ಇಲ್ಲವೆ ಟೀಕೆಗೆ ಗುರಿಯಾಗುವಿರಿ. ವಿದ್ಯುತ್‌ ಪರಿಕರಗಳಿಂದ ಹಾನಿ ಸಂಭವವಿದ್ದು ಅವುಗಳಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಅದೃಷ್ಟ ಸಂಖ್ಯೆ 8

ಧನುಸ್ಸು:- ಹಿರಿಯರ ಆರೋಗ್ಯಕ್ಕಾಗಿ ಆಸ್ಪತ್ರೆ ಖರ್ಚು ಎದುರಾಗುವುದು. ನಿಮ್ಮ ಶಕ್ತಿ ಮೀರಿ ಕೆಲಸ ಮಾಡಿದರೆ ದೈಹಿಕ ಮತ್ತು ಮಾನಸಿಕ ಹಿಂಸೆಗಳಿಗೆ ಒಳಗಾಗುವಿರಿ. ಕಲಾವಿದರ ಹಾಗೂ ವಿದ್ವಾಂಸರ ಭೇಟಿಯಾಗಲಿದೆ. ಭೂಸಂಬಂಧಿ ವ್ಯವಹಾರಗಳಿಂದ ಒಳಿತಾಗುವುದು. ಸಂಗಾತಿಯ ಸಲಹೆಯಂತೆ ನಡೆದರೆ ಒಳಿತಾಗುವುದು. ದಾನದಿಂದ ನೆಮ್ಮದಿ ಸಿಗುವುದು. ಅದೃಷ್ಟ ಸಂಖ್ಯೆ 6

ಮಕರ:- ಅನಿರೀಕ್ಷಿತವಾಗಿ ಸಾಧು ಸಂತರ ಭೇಟಿಯಾಗಲಿರುವಿರಿ. ಗೊಂದಲ ತಿಳಿಯಾಗುವುದು. ಸದ್ಯದಲ್ಲೇ ಶುಭ ಸಮಾಚಾರ ಕೇಳುವಿರಿ. ನಿಮ್ಮ ಹೆಸರು ಮತ್ತು ಒಳ್ಳೆಯತನ ದುರುಪಯೋಗ ಆಗದಂತೆ ನೋಡಿಕೊಳ್ಳಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಗುರುವಾರ, ಶುಕ್ರವಾರ ಉತ್ತಮ ದಿನಗಳು. ಅದೃಷ್ಟ ಸಂಖ್ಯೆ 3

ಕುಂಭ:- ನೀವು ಹಮ್ಮಿಕೊಂಡ ಕಾರ್ಯ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಕೃಷಿಕರಿಗೆ ಹಾಗೂ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಲಾಭ ಬರುವುದು. ಕುಟುಂಬ ಸದಸ್ಯರ ಬೆಂಬಲ ನಿಮಗಿರುವುದು. ದೈನಂದಿನ ಕೆಲಸಗಳು ನಿರಾತಂಕವಾಗಿ ಮುಗಿಯುವವು. ಮನಸ್ಸಿನ ಅನಿಸಿಕೆಗಳನ್ನು ಹಿರಿಯರ ಮುಂದೆ ಅಥವಾ ಹಿತೈಷಿಗಳ ಮುಂದೆ ಹೇಳಿಕೊಳ್ಳಿ. ಅದೃಷ್ಟ ಸಂಖ್ಯೆ 4

ಮೀನ:- ನ್ಯಾಯಾಲಯದ ಖಟ್ಲೆಗಳು ನಿಮ್ಮ ಪರವಾಗಲಿವೆ. ವೈಯಕ್ತಿಕ ಜೀವನ ಉತ್ತಮಗೊಳ್ಳಲಿದೆ. ಸರ್ಕಾರಿ ಉನ್ನತಾಧಿಕಾರಿಗಳಿಗೆ ಸ್ಥಾನಪಲ್ಲಟವಿದೆ. ಹಳೆ ಮನೆ ರಿಪೇರಿ ಮಾಡುವಿರಿ ಅಥವಾ ಹಳೆ ಮನೆಯನ್ನು ಮಾರಾಟ ಮಾಡುವಿರಿ. ಸಹಕಾರ ಸಂಸ್ಥೆಗಳಿಂದ ಧನ ಸಹಾಯ ದೊರೆಯಲಿದೆ. ಸಾಮಾಜಿಕ ಗೌರವಾದರಗಳು ಹೆಚ್ಚಾಗುವವು ಅದೃಷ್ಟ ಸಂಖ್ಯೆ 9.

ಶ್ರೀ ದುರ್ಗಾದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಘುರಾಮ್ ಶಾಸ್ತ್ರಿ ನಿಮ್ಮ ಯಾವುದೇ ವಶೀಕರಣ ಮಾಟ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ

Leave a Reply

This site uses Akismet to reduce spam. Learn how your comment data is processed.