ಮಂಗಳೂರು,ಉಡುಪಿ ಸೇರಿದಂತೆ ಇನ್ನೂ ಹಲವು ಕ್ಷೇತ್ರಗಳ ಹಾಲಿ ಎಂಪಿಗಳಿಗೆ ನಡುಕ !!

ಈ ಸುದ್ದಿಯನ್ನು ಶೇರ್ ಮಾಡಿ


ಬೆಂಗಳೂರು:ಲೋಕಸಭಾ ಚುನಾವಣಾ ಕಣಕ್ಕೆ ದುಮುಕಲಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಗೊಂದಲ ಏರ್ಪಟ್ಟ ಹಿನ್ನಲೆಯಲ್ಲಿ ಬಿಜೆಪಿ ಪ್ರಮುಖ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ,ಈ ಬೆಳವಣಿಗೆ ಮಂಗಳೂರು,ಉಡುಪಿ ಸೇರಿದಂತೆ ಇನ್ನೂ ಹಲವು ಕ್ಷೇತ್ರಗಳ ಹಾಲಿ ಎಂಪಿಗಳಿಗೆ ನಡುಕು ಉಂಟಾಗಿದೆ .ಲೋಕಸಭಾ ಟಿಕೆಟ್‌ ಹಂಚಿಕೆಗಾಗಿ ಅಮಿತ್‌ ಶಾ, ರಾಮಲಾಲ್ ಜೊತೆಗಿನ ಸಭೆಗಾಗಿ ಬೆಂಗಳೂರಿನ ಕೋರ್‌ ಕಮಿಟಿ ಸಭೆಯ ನಂತರ ಯಡಿಯೂರಪ್ಪ ಒಬ್ಬರೇ ದಿಲ್ಲಿಗೆ ಬರುವವರಿದ್ದರು. ಆದರೆ ರಾಮಲಾಲ್ ಅವರು ಅರುಣ್‌ ಕುಮಾರ್‌ಗೆ ಫೋನ್‌ ಮಾಡಿ, ಈಶ್ವರಪ್ಪ, ಶೆಟ್ಟರ್‌, ಪ್ರಹ್ಲಾದ್‌ ಜೋಶಿ, ಲಿಂಬಾವಳಿ, ಸಿ ಟಿ ರವಿಯನ್ನು ಕರೆದುಕೊಂಡು ಬನ್ನಿ ಎಂದು ಹೇಳಿದ್ದು ಯಡಿಯೂರಪ್ಪ ಅವರಿಗೆ ಸ್ವಲ್ಪ ಕಿರಿಕಿರಿ ಮಾಡಿದೆ. ಒಂದು ವೇಳೆ ಇವರೆಲ್ಲ ಅಮಿತ್‌ ಶಾ ಎದುರು ಶೋಭಾ ಕರಂದ್ಲಾಜೆ ಟಿಕೆಟ್‌ಗೆ ವಿರೋಧ ಮಾಡಿ ತಪ್ಪಿಸಿದರೆ ಏನು ಮಾಡಬೇಕು ಎನ್ನುವ ಆತಂಕ ಅವರದು.

ಸಿ ಟಿ ರವಿ ಅಂತೂ ಶೋಭಾಗೆ ಯಾಕೆ ಟಿಕೆಟ್‌ ಕೊಡಲು ವಿರೋಧ ವ್ಯಕ್ತಪಡಿಸುತ್ತಿದ್ದು,ಇನ್ನೊಂದು ಕಡೆ ನಳಿನ್ ಕುಮಾರ್ ಕಟೀಲ್ ಗೆ ಸಂಘ ಪರಿವಾರದ ಒಂದು ಬಣ ಮತ್ತು ಕಾರ್ಯಕರ್ತರ ವಲಯದಿಂದ ಕೂಡ ಆಕ್ರೋಶ ವಿರೋಧ ವ್ಯಕ್ತವಾಗುತ್ತಿದ್ದು ಟಿಕೆಟ್ ಹಂಚಿಕೆಯಲ್ಲಿ ಈಗಾಗಲೇ ಭಾರೀ ಗೊಂದಲವನ್ನು ಸೃಷ್ಟಿ ಆಗಿದೆ. ಶೋಭಾ ಕರಂದ್ಲಾಜೆ ಬದಲಾವಣೆಗೆ ಒತ್ತಡಗಳು ಹೆಚ್ಚಾಗುತ್ತಿದ್ದು. ಇದು ಒಂದು ವೇಳೆ ಕ್ಲಿಕ್‌ ಆದರೆ ಬಿಜೆಪಿ ಒಳಜಗಳ ಇನ್ನಷ್ಟುಮುಂದೆ ಹೋಗಲಿದೆ. ಶೋಭಾಗೆ ಟಿಕೆಟ್‌ ತಪ್ಪಿದರೆ ತಮ್ಮ ಬುಡಕ್ಕೂ ಬರಬಹುದು ಎನ್ನುವ ಆತಂಕ ಭಗವಂತ್‌ ಖೂಬಾ, ನಳಿನ್‌ ಕಟೀಲು ಮತ್ತು ಸುರೇಶ್‌ ಅಂಗಡಿ ಅವರಿಗಿದೆ. ಸಂತೋಷ್ ಅವರು ನಳಿನ್ ಕುಮಾರ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದು ಶೋಭಾ ಕರಂದ್ಲಾಜೆ ಪರವಾಗಿ ಯಡಿಯೂರಪ್ಪನವರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಎರಡು ಕ್ಷೇತ್ರಗಳು ಇವರಿಬ್ಬರ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು. ಟಿಕೆಟ್ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

This site uses Akismet to reduce spam. Learn how your comment data is processed.