ಪ್ರಜ್ವಲ್ ನಿಖಿಲ್ ಗೆ ಸೋಲಿನ ಭಯ ಸಿದ್ದರಾಮಯ್ಯ ಮೊರೆ ಹೋದ ರೇವಣ್ಣ !!

ಈ ಸುದ್ದಿಯನ್ನು ಶೇರ್ ಮಾಡಿ


ಬೆಂಗಳೂರು : ರಾಜ್ಯ ಸಮ್ಮಿಶ್ರ ಸರ್ಕಾರದ ಚಾಣಕ್ಯ ಎಂದೇ ಗುರುತಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಭಾರಿ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ದೇವೇಗೌಡರ ಮೊಮ್ಮಕ್ಕಳು ಸ್ಪರ್ಧಿಸುವ ಹಾಸನ ಮತ್ತು ಮಂಡ್ಯದಲ್ಲಿ ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಬರಬೇಕೆಂದು ಜೆಡಿಎಸ್ ವರಿಷ್ಠರು ಪಟ್ಟು ಹಿಡಿದಿದ್ದಾರೆ ಈ ಎರಡೂ ಕ್ಷೇತ್ರಗಳಲ್ಲಿ ದೇವೇಗೌಡರ ಮೊಮ್ಮಕ್ಕಳಿಗೆ ಭಾರಿ ಪೈಪೋಟಿ ಏರ್ಪಟ್ಟಿದ್ದು ಒಂದು ವೇಳೆ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ನೊಂದಿಗೆ ಕೈ ಜೋಡಿಸದಿದ್ದರೆ ಸೋಲು ಕಟ್ಟಿಟ್ಟ ಬುಟ್ಟಿ ಎಂಬುದು ಅರಿವಾಗುತ್ತಿದ್ದಂತೆ ಶುಕ್ರವಾರ ರಾತ್ರಿ ಸಚಿವ ಎಚ್ ಡಿ ರೇವಣ್ಣ ಅವರು ಕಾವೇರಿಯ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.

ಹಾಸನದಲ್ಲಿ ತಮ್ಮ ಮಗ ಪ್ರಜ್ವಲ್ ರೇವಣ್ಣ ಸ್ಪರ್ಧೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ .ಇನ್ನು ಮಂಡ್ಯ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ನಿಖಿಲ್ ಪರ ಪ್ರಚಾರ ಮಾಡಿದರೆ ಮಾತ್ರ ನಾವು ಕೂಡ ಮೈಸೂರು ಕ್ಷೇತ್ರದಲ್ಲಿ ನಿಮಗೆ ಬೆಂಬಲ ನೀಡುತ್ತೇವೆ ಎಂದು ಕಾಂಗ್ರೆಸ್ಗೆ ನೇರ ಎಚ್ಚರಿಕೆಯನ್ನು ಸಚಿವ ಸಾರಾ ಮಹೇಶ್ ನೀಡಿದ್ದಾರೆ .

Leave a Reply

This site uses Akismet to reduce spam. Learn how your comment data is processed.