ನಮ್ಮ ಹಿಂದೆ ಬಿದ್ದ ಮಾಧ್ಯಮದವರಿಗೆ ದೇವರು ಶಿಕ್ಷೆ ಕೊಡುತ್ತಾನೆ : ಎಚ್ ಡಿ ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಪರಿಗಣಿತವಾಗಿರುವ ಎಚ್ ಡಿ ರೇವಣ್ಣ ಅವರು ಕೆಲವು ದಿನಗಳಿಂದ ಸಮ್ಮಿಶ್ರ ಸರ್ಕಾರದ ಉಳಿವಿಗಾಗಿ ಟೆಂಪಲ್ ರನ್ ಮುಂದುವರಿಸಿದ್ದಾರೆ .ಗ್ರಹಣ ನಿವಾರಣೆಗೆ ಇಂದು ಎಲ್ಲೆಡೆ ಪೂಜೆ ನಡೆಯುತ್ತಿದ್ದು ಈ ಮಧ್ಯೆ ಎಚ್ ಡಿ ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ದೇವರ ಮೊರೆ ಹೋಗಿದ್ದಾರೆ .ಶಂಕರ ಮಠದಲ್ಲಿ ನಡೆಯುತ್ತಿದ್ದ ವಿಶೇಷ ಪೂಜೆಯಲ್ಲಿ ರೇವಣ್ಣ ಅವರು ಭಾಗಿಯಾಗುತ್ತಿದ್ದ ಮೇಲೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ರೇವಣ್ಣ ಕೆಂಡಾಮಂಡಲವಾಗಿದ್ದಾರೆ .ನೀವು ಎಲ್ಲಿಗೆ ಯಾಕೇ ಬಂದಿದ್ದೀರಾ ಒಂದು ವರ್ಷದಿಂದ ನಿಮ್ಮಿಂದ ಅನುಭವಿಸಿದ್ದು ತುಂಬಾ ಇದೆ .ನಿಮಗೆ ದೇವರು ಶಿಕ್ಷೆ ಕೊಡುತ್ತಾನೆ ಎಂದು ಶಾಪ ಹಾಕಿದ್ದಾರೆ .ಕೆಲವು ದಿನಗಳ ಹಿಂದೆಯೇ ಮಂಗಳೂರಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು .ರೇವಣ್ಣ ಅವರು ಕಿಡಿಕಾರಿದ ವಿಡಿಯೋ ಇಲ್ಲಿದೆ ನೋಡಿ

Leave a Reply

This site uses Akismet to reduce spam. Learn how your comment data is processed.