ಶ್ರಾವಣ ಮಾಸದ ಮೊದಲ ವಾರದಲ್ಲಿ ಬಿಜೆಪಿ ಸರ್ಕಾರ ರಚನೆ ?

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಹದಿಮೂರು ಕಾಂಗ್ರೆಸ್ ಜೆಡಿಎಸ್ ನಾಯಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ .ಅಲ್ಲದೆ ದಿನೇ ದಿನೇ ರಾಜೀನಾಮೆ ನೀಡುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದ ಬೆನ್ನಲ್ಲೇ ವಿರೋಧ ಪಕ್ಷವಾದ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಸದ್ದಿಲ್ಲದೆ ತಯಾರಿ ಮಾಡುತ್ತಿದೆ .ದೋಸ್ತಿ ಸರಕಾರದ ಪತನಕ್ಕೆ ಬಿಜೆಪಿ ಹೈಕಮಾಂಡ್ ಸದ್ದಿಲ್ಲದೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ತಮ್ಮ ಆಪ್ತರಾದ ಅಶ್ವತ್ ನಾರಾಯಣ್, ಅರವಿಂದ್ ಲಿಂಬಾವಳಿ ,ಸಿಪಿ ಯೋಗೀಶ್ವರ್ ಸೇರಿ ಆಪ್ತ ಸಹಾಯಕ ಎನ್ ಆರ್ ಸಂತೋಷ್ ನೇತೃತ್ವದ ತಂತ್ರಗಾರಿಕೆ ಬಹುತೇಕ ಸಫಲತೆ ಕಂಡಿದ್ದು, ಇನ್ನಷ್ಟು ಶಾಸಕರನ್ನು ರಾಜೀನಾಮೆ ನೀಡುವ ಮೂಲಕ ಸಮ್ಮಿಶ್ರ ಸರಕಾರವನ್ನು ಅಲ್ಪಮತಕ್ಕೆ ಇಳಿಸಿ ವಿಧಾನಸಭೆ ವಿಸರ್ಜನೆಗೆ ಅವಕಾಶವಿಲ್ಲದಂತೆ ಮಾಡುವುದು ಬಿಜೆಪಿ ತಂತ್ರಗಾರಿಕೆಯಾಗಿದೆ.

ಈ ನಡುವೆ ರಾಜೀನಾಮೆ ಕೊಟ್ಟ ಶಾಸಕರನ್ನು ಅನರ್ಹಗೊಳಿಸಿದರೆ ಸ್ಪೀಕರ್ ವಿರುದ್ಧವೇ ಅವಿಶ್ವಾಸ ಮಂಡಿಸಲು ಬಿಜೆಪಿ ನಿರ್ಮಾಣಗೊಂಡಿದೆ .ಇನ್ನು ಬಿಜೆಪಿ ತನ್ನ ಪಕ್ಷದ ಶಾಸಕರಿಗೆ ಶಿಸ್ತಿನ ಪಾಠವನ್ನು ಕಲಿಸಲು ಮಂಗಳವಾರ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದು ಯಾವ ಶಾಸಕರಿಗೂ ಯಾವುದೇ ಹೇಳಿಕೆ ನೀಡದಂತೆ ಕಟ್ಟುನಿಟ್ಟಿನ ಸೂಚನೆ ಕೂಡ ರವಾನಿಸಲಾಗಿದೆ .ಬಿಜೆಪಿ ಉನ್ನತ ಮೂಲದ ಪ್ರಕಾರ ಶ್ರಾವಣ ಮಾಸದ ಮೊದಲ ವಾರದಲ್ಲಿ ಹೊಸ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಎಲ್ಲ ತಯಾರಿಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದ್ದು. ಕನಿಷ್ಠ ಸಮ್ಮಿಶ್ರ ಸರ್ಕಾರದ ಪತನಕ್ಕೆ ಹದಿನೈದು ದಿನಗಳಾದರೂ ಬೇಕು ಎಂದು ಬಿಜೆಪಿ ಲೆಕ್ಕಾಚಾರ ವಾಗಿದ್ದು ಈ ನಡುವೆ ರಾಜ್ಯಪಾಲರು ಮತ್ತು ವಿಧಾನಸಭೆ ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರ ಯಾವ ರೀತಿ ಇರುತ್ತದೆ ಎಂಬುದು ಕಾದು ನೋಡಬೇಕಿದೆ

Leave a Reply

This site uses Akismet to reduce spam. Learn how your comment data is processed.