ಶೀಘ್ರ ಕರ್ತವ್ಯಕ್ಕೆ ಮರಳುತ್ತೇನೆ :ವಿಂಗ್ ಕಮಾಂಡರ್ ಅಭಿನಂದನ್

ಈ ಸುದ್ದಿಯನ್ನು ಶೇರ್ ಮಾಡಿ


ಶತ್ರುವಿನ ನೆಲದಲ್ಲಿ ಕೆಚ್ಚೆದೆ ಮೆರೆದ ವಿಂಗ್ ಕಮಾಂಡೋ ಅಭಿನಂದನ್ ವರ್ಧಮಾನ್ ಅವರು ನಿನ್ನೆಯಷ್ಟೇ ಪಾಕಿಸ್ತಾನದಿಂದ ವಾಘಾ ಗಡಿ ಮೂಲಕ ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ತಾವು ಆರೋಗ್ಯವಾಗಿದ್ದು ಶೀಘ್ರದಲ್ಲೇ ಕರ್ತವ್ಯಕ್ಕೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ. ವಾಯುಪಡೆಯ ಸೇನಾಧಿಕಾರಿಗಳು ಮೊದಲು ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿದ್ದರು ಎಂದು ಅವರು ಹೇಳಿದರು.ಸದ್ಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭಾರತೀಯ ವಾಯುಪಡೆಯ ಹಾಸ್ಟೇಲ್‌ನಲ್ಲಿ ವಾಸ್ತವ್ಯ ಹೂಡಿದು ಅಲ್ಲಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಪಾಕಿಸ್ತಾನದಿಂದ ಆಗಮಿಸಲಿರುವ ಹಿನ್ನಲೆಯಲ್ಲಿ ಸೇನಾ ನಿಯಮದ ಪ್ರಕಾರ ಅವರನ್ನು ವಿಚಾರಣೆಗೆ ಗುರಿಪಡಿಸಲಾಗುತ್ತದೆ. ಪಾಕ್ ಸೇನೆಯಲ್ಲಿದ್ದ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆಯೂ ವಾಯುಪಡೆಯ ಅಧಿಕಾರಿಗಳು ಅಭಿನಂದನ್ ಅವರನ್ನು ವಿಚಾರಣೆಗೆ ಗುರಿಪಡಿಸಲಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸುವ ಸಾಧ್ಯತೆ ಇದೆ.

Leave a Reply

This site uses Akismet to reduce spam. Learn how your comment data is processed.