ಪಶ್ಚಿಮ ಬಂಗಾಲ ಚುನಾವಣಾ ದಿನಾಂಕ ಬದಲಾಯಿಸಲು ಪಟ್ಟು ಹಿಡಿದ ತೃಣಮೂಲ ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದ್ದು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಮಾರ್ಚ್ 10ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿತ್ತು.ಪಶ್ಚಿಮ ಬಂಗಾಳದಲ್ಲಿ ರಂಜಾನ್ ಸಮಯ ಲೋಕಸಭಾ ಚುನಾವಣೆ ನಡೆಯುವುದರಿಂದ ಮುಸ್ಲಿಮರಿಗೆ ಮತ ಚಲಾಯಿಸಲು ತೊಂದರೆಯಾಗುತ್ತದೆ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಚುನಾವಣಾ ದಿನಾಂಕವನ್ನು ಬದಲಾಯಿಸಲು ಪಟ್ಟು ಹಿಡಿದಿದೆ.

ಪಶ್ಚಿಮ ಬಂಗಾಲದಲ್ಲಿ ಎಪ್ರಿಲ್ 11 ರಿಂದ ಮೇ19 ರವರೆಗೆ ಚುನಾವಣೆ ನಡೆಯಲಿದೆ ಆದರೆ ಈ ದಿನಾಂಕವನ್ನು ಒಪ್ಪದ ತಣಮೂಲ ಕಾಂಗ್ರೆಸ್ ದಿನಾಂಕವನ್ನು ಬದಲಾಯಿಸಲು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ .ಈ ಬಗ್ಗೆ ಪ್ರತಿಕ್ರಿಯಿಸಿದ ಕೋಲ್ಕತಾ ಫೈರ್ಹಾದ್ ಹಕೀಮ್ ಅವರು ಕೇಂದ್ರ ಸರ್ಕಾರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಈ ರೀತಿಯ ಘೋಷಣೆಯನ್ನು ಮಾಡಿದೆ ರಂಜಾನ್ ಸಮಯವಾದ್ದರಿಂದ ಮುಸ್ಲಿಮರು ಮತ ಚಲಾಯಿಸಲು ತೊಂದರೆಯಾಗುತ್ತದೆ ಎಂದು ಅವರು ಹೇಳಿದ್ದಾರೆ .ತೃಣಮೂಲ ಕಾಂಗ್ರೆಸ್ ನಿರ್ಧಾರಕ್ಕೆ ಮೌಲ್ವಿಗಳು ಕೂಡ ಬೆಂಬಲ ನೀಡಿದ್ದಾರೆ .

Leave a Reply

This site uses Akismet to reduce spam. Learn how your comment data is processed.