ಗಡ್ಡ ಬೋಳಿಸಿ ಹಲ್ಲೆ ನಡೆಸಿದರು ಎಂದಿದ್ದ ಮುಸ್ಲಿಂ ವ್ಯಕ್ತಿ, ಆದರೆ ತನಿಖೆಯಲ್ಲಿ ಬಯಲಾದದ್ದು ಬೇರೇನೇ ವಿಷಯ

ಈ ಸುದ್ದಿಯನ್ನು ಶೇರ್ ಮಾಡಿ

ಉತ್ತರ ಪ್ರದೇಶದಲ್ಲಿ ವರದಿಯಾದ ವಿಚಿತ್ರವಾದ ಪ್ರಕರಣ ಒಂದರಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಮೇಲೆ ಗುಂಪೊಂದು ಹಲ್ಲೆ ನಡೆಸಿ ತನ್ನ ಗಡ್ಡವನ್ನು ಬೋಳಿಸಿದ್ದರು ಎಂದು ಹೇಳಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದ್ದರು. ಪ್ರಕರಣದ ಪ್ರಾಥಮಿಕ ತನಿಖೆ ಇದೀಗ ಮುಗಿದಿದ್ದು, ಪೊಲೀಸರು ನಡೆಸಿದ ತನಿಖೆಯಲ್ಲಿ ವ್ಯಕ್ತಿ ನಕಲಿ ಕತೆಯನ್ನು ಸೃಷ್ಟಿ ಮಾಡಿ ತನ್ನ ಗಡ್ಡವನ್ನು ತಾನೇ ಬೋಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ :ಉತ್ತರ ಪ್ರದೇಶದ ಭಾಗ್ಪತ್ ಮೊಘಲ್ಪುರ ನಿವಾಸಿ ಮೊಹಮ್ಮದ್ ಫಾರೂಕ್ ಐದು ವರ್ಷಗಳ ಹಿಂದೆ ನಗರದಲ್ಲಿ ನಡೆದ ಇಜ್ತಿಮಾದಲ್ಲಿ ಪಾಲ್ಗೊಂಡು ಫಾರೂಕ್ ತನ್ನ ಗಡ್ಡ ಬೆಳೆಸಲು ಪ್ರಾರಂಭಿಸಿದ್ದಾರೆ .ನಂತರದ ದಿನಗಳಲ್ಲಿ ಮುಖದಲ್ಲಿ ಬೆಳೆದ ಭಾರಿ ಗಡ್ಡದ ಪರಿಣಾಮ ದೈನಂದಿನ ಜೀವನವನ್ನು ಸಮರ್ಪಕವಾಗಿ ನಿರ್ವಹಿಸಲಾಗದೆ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ತಾವು ಗಡ್ಡ ತೆಗೆಯಲು ಮುಂದಾದಾಗ ಕುಟುಂಬಸ್ಥರು ಮತ್ತು ಮುಸ್ಲಿಂ ಮುಖಂಡರು ತಕರಾರು ವ್ಯಕ್ತಪಡಿಸಿದ್ದಾರೆ. ಇದರಿಂದ ಬೇಸತ್ತ ಫಾರೂಕ್ ಅವರು ಗುರುವಾರ ಬೆಳಗ್ಗೆ ಬಾಗಪತ್‌ ನಿಂದ ದೆಹಲಿಗೆ ತನ್ನ ಗೆಳೆಯ ಹಾಸಿಂನನ್ನು ಭೇಟಿಯಾಗಲು ಪ್ರಯಾಣ ಬೆಳೆಸಿದ್ದಾರೆ .ನಂತರ ಹಾಸಿಂ ಜೊತೆ ತಮ್ಮ ಗಡ್ಡ ಬೋಳಿಸುವ ವಿಚಾರವನ್ನು ಹೇಳಿಕೊಂಡಿದ್ದು ಹಾಸಿಂ ಕೂಡ ಗಡ್ಡ ಬೋಳಿಸಲು ನಿರಾಕರಿಸಿದ್ದಾರೆ. ನಂತರ ಸೆಲೂನ್ ಒಂದರಲ್ಲಿ ಫಾರೂಕ್ ತಮ್ಮ ಗಡ್ಡವನ್ನು ತೆಗೆಸಿಕೊಂಡಿದ್ದಾರೆ .ಸಂಜೆ ದೆಹಲಿಯಿಂದ ಬಾಗ್ಪತ್ ಗೆ ಮರಳಿದ ವೇಳೆ ತಮ್ಮ ಕುಟುಂಬಸ್ಥರಿಂದ ಮತ್ತು ಸ್ಥಳೀಯ ಮುಸ್ಲಿಂ ನಾಯಕರ ಬಗ್ಗೆ ಹೆದರಿ ನನ್ನನ್ನು ರೈಲಿನಲ್ಲಿ ಗುಂಪೊಂದು ಹಲ್ಲೆ ನಡೆಸಿ ಗಡ್ಡ ಬೋಳಿಸಿದ್ದಾರೆ ಅಲ್ಲದೆ ಹತ್ತು ಸಾವಿರ ಕೂಡ ಕಿತ್ತುಕೊಂಡಿದ್ದಾರೆ ಎಂದು ಕಥೆ ಕಟ್ಟಿದ್ದರು.ಈ ಸಂಬಂಧ ಫಾರೂಕ್ ಸಂಬಂಧಿಕರು ಟ್ವಿಟ್ಟರ್ ನಲ್ಲಿ ಗೃಹ ಸಚಿವರು ಮುಖ್ಯಮಂತ್ರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಟ್ವೀಟ್ ಮಾಡಿದ್ದರು ಈ ಸಂಬಂಧ ಎಸ್ಪಿ ಪ್ರತಾಪ್ ಪಂದ್ರ ಯಾದವ್ ಅವರು ಪೊಲೀಸ್ ಅಧಿಕಾರಿಗಳಿಗೆ ಕೂಡಲೇ ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ನಂತರ ನಡೆದ ತನಿಖೆಯ ಬೆಳವಣಿಗೆಯಲ್ಲಿ ಫಾರೂಕ್ ಅವರು ತಮ್ಮ ಗಡ್ಡದಿಂದ ಬೇಸತ್ತು ಈ ರೀತಿ ಕತೆ ಕಟ್ಟಿ ತಮ್ಮ ಗಡ್ಡವನ್ನು ತಾವೇ ಬೋಳಿಸಿಕೊಂಡಿದ್ದಾರೆ ಎಂದು ಬೆಳಕಿಗೆ ಬಂದಿದೆ.

Loading...

Leave a Reply

This site uses Akismet to reduce spam. Learn how your comment data is processed.