ಉತ್ತರ ಪ್ರದೇಶದಲ್ಲಿ ಒಂದೇ ಒಂದು ಗೋ ಹತ್ಯೆಯನ್ನು ಮಾಡಲು ನಾವು ಬಿಡುವುದಿಲ್ಲ : ಯೋಗಿ ಆದಿತ್ಯನಾಥ್

ಈ ಸುದ್ದಿಯನ್ನು ಶೇರ್ ಮಾಡಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಆಲಿಘಡ್ ದಲ್ಲಿ 1135 ಕೋಟಿ ರೂಗಳ 352 ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು ಹಿಂದಿನ ಸರ್ಕಾರದಲ್ಲಿ ಉದ್ಯಮಗಳು ಸ್ಥಗಿತಗೊಂಡಿತ್ತು. ಇದನ್ನು ನಾವೀಗ ಮತ್ತೆ ಪ್ರಾರಂಭಿಸಿದ್ದೇವೆ.ಮುಂದಿನ ದಿನಗಳಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುವುದು, ಆ ನಿಟ್ಟಿನಲ್ಲಿ ಉದ್ಯಮಿಗಳನ್ನು ಕೂಡ ಸಂಪರ್ಕಿಸಲಾಗಿದೆ ಎಂದಿದ್ದಾರೆ. ಇನ್ನು ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷೇಧ ಮುಂದುವರಿಯಲಿದೆ ಅದನ್ನು ಹಿಂಪಡೆಯಲು ನಾವು ಯಾವತ್ತಿಗೂ ಅನುಮತಿ ನೀಡುವುದಿಲ್ಲ ಮತ್ತು ಹಸುಗಳು ರೈತರ ಬೆಳೆಗಳಿಗೆ ಹಾನಿ ಮಾಡದಂತೆ ಕ್ರಮ ಕೈಗೊಳ್ಳುವುದಾಗಿ ಯೋಗಿ ಆಧಿತ್ಯನಾಥ್ ತಿಳಿಸಿದ್ದು ನಿರ್ಗತಿಕ ಹಸುಗಳ ರಕ್ಷಣೆಗೆ ನಾವು ಯೋಜನೆ ತಂದಿದ್ದೇವೆ ಎಂದಿದ್ದಾರೆ . .ವಿರೋಧ ಪಕ್ಷಗಳು ಪದೇ ಪದೆ ಗೋಹತ್ಯೆ ನಿಷೇಧ ಮತ್ತು ಬೀಡಾಡಿ ದನಗಳ ಕುರಿತು ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಅವರು ಈ ಹೇಳಿಕೆ ನೀಡಿದ್ದಾರೆ .ರಾಜ್ಯದಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಿದ್ದೇವೆ ಈ ಹಿಂದಿನ ಸರ್ಕಾರಗಳು ಅವರೊಂದಿಗೆ ಕೈ ಜೋಡಿಸಿದ್ದವು, ಸಮಾಜ ಘಾತುಕರು ಕಾನೂನಿಗೆ ಹೆದರುತ್ತಿರಲಿಲ್ಲ.ಈಗ ಕಾನೂನು ಸುವ್ಯವಸ್ಥೆ ಬಗ್ಗೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದಿದ್ದಾರೆ.

Leave a Reply

This site uses Akismet to reduce spam. Learn how your comment data is processed.