ಅಸ್ಸಾಂ ಮೂವರು ಉಲ್ಫಾ ಉಗ್ರರನ್ನು ಬಂಧಿಸಿದ ಭದ್ರತಾ ಪಡೆಗಳು

ಈ ಸುದ್ದಿಯನ್ನು ಶೇರ್ ಮಾಡಿ

ಅಸ್ಸಾಂನಲ್ಲಿ ನಿಷೇಧಿತ ಉಲ್ಫಾ ಸಂಘಟನೆಯ ಮೂವರು ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ .ಗುಪ್ತಚರ ಇಲಾಖೆಯ ಖಚಿತ ಮಾಹಿತಿಯನ್ನಾಧರಿಸಿ ಅಸ್ಸಾಂ ತಿನ್ಸುಕಿಯಾ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿ ಮೂವರು ಶಸ್ತ್ರಸಜ್ಜಿತ ಉಗ್ರರನ್ನು ಹೆಡೆಮುರಿ ಕಟ್ಟಿ ಬಂಧಿಸಲಾಗಿದೆ .ಉಲ್ಫಾ ಉಗ್ರ ಸಂಘಟನೆ ಪ್ರತ್ಯೇಕ ಅಸ್ಸಾಂ ರಾಜ್ಯ ಬೇಡಿಕೆಯಿಟ್ಟು ಹಿಂಸಾತ್ಮಕ ಹಾದಿ ತುಳಿದ ಹಿನ್ನೆಲೆಯಲ್ಲಿ ಈ ಸಂಘಟನೆಯನ್ನು ನಿಷೇಧಗೊಳಿಸಲಾಗಿದೆ .ಪ್ರಸ್ತುತ ಬಂಧಿತ ಉಗ್ರರ ವಿಚಾರಣೆ ರಹಸ್ಯ ಸ್ಥಳದಲ್ಲಿ ಮುಂದುವರಿಸಲಾಗಿದೆ ಎಂದು ವರದಿಗಳು ತಿಳಿಸಿವೆ

Leave a Reply

This site uses Akismet to reduce spam. Learn how your comment data is processed.