ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊಗಳಿದ ಶಶಿ ತರೂರ್

ಈ ಸುದ್ದಿಯನ್ನು ಶೇರ್ ಮಾಡಿ

ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಮಂಗಳವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊಗಳಿದ್ದಾರೆ .ಟಿಪ್ಪು ಸುಲ್ತಾನ್ ನನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದ ಇಮ್ರಾನ್ ಖಾನ್ ಟ್ವೀಟಿಗೆ ಪ್ರತಿಕ್ರಿಯಿಸುತ್ತಾ ‘ಭಾರತ ಉಪಖಂಡದ ಇತಿಹಾಸದ ಬಗ್ಗೆ ನೀವು ಹಂಚಿಕೊಂಡ ವಿಚಾರ ಸೂಕ್ತವಾದುದು ಮತ್ತು ದೂರಗಾಮಿ ಪರಿಣಾಮ ಬೀರುವಂಥದ್ದು. ಇಮ್ರಾನ್ ಖಾನ್ ಸಾಕಷ್ಟು ಓದುತ್ತಾರೆ, ಕಾಳಜಿ ವಹಿಸುತ್ತಾರೆ. ಶ್ರೇಷ್ಠ ಭಾರತೀಯ ನಾಯಕನೊಬ್ಬನ ಪುಣ್ಯತಿಥಿಯಂದು ಪಾಕ್ ಪ್ರಧಾನಿ ಆತನನ್ನು ಸ್ಮರಿಸಿರುವುದು ಶ್ಲಾಘನೀಯ’ ಎಂದು ತರೂರ್ ಹೇಳಿದ್ದಾರೆ.

Leave a Reply

This site uses Akismet to reduce spam. Learn how your comment data is processed.