“ಶಾರದಾ ಚಿಟ್ಫಂಡ್ ಹಗರಣ” ಪೊಲೀಸ್ ಆಯುಕ್ತರನ್ನು ತನಿಖೆ ನಡೆಸಲು ಬಂಡ ಸಿಬಿಐ ಅಧಿಕಾರಿಗಳ ಬಂಧನ :ಸಿಆರ್ಪಿಎಫ್ ಪಡೆಗಳ ರವಾನೆ

ಈ ಸುದ್ದಿಯನ್ನು ಶೇರ್ ಮಾಡಿ

ಪಶ್ಚಿಮ ಬಂಗಾಳದಲ್ಲಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ನಿನ್ನೆ ರಾತ್ರಿಯಿಂದ ಇತಿಹಾಸವೇ ಕಂಡರಿಯದ ಕಾನೂನು ಮತ್ತು ಬೀದಿ ಸಮರಗಳು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ.ಶಾರದಾ ಚಿಟ್ ಫಂಡ್ ಮತ್ತು ರೋಸ್ ವ್ಯಾಲಿ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಹೊರಡಿಸಿದ್ದ ನೋಟಿಸ್ಗೆ ಉತ್ತರ ನೀಡದೆ ತಲೆಮರೆಸಿಕೊಂಡಿದ್ದ ಕೋಲ್ಕತ್ತಾ ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ತನಿಖೆಗೆ ಆಗಮಿಸಿದ್ದ ಸಿಬಿಐ ಅಧಿಕಾರಿಗಳನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿ ಸ್ಥಳೀಯ ಠಾಣೆಗೆ ಕೊಂಡೊಯ್ದಿದ್ದಾರೆ.ಈ ನಡುವೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಯುಕ್ತರ ನಿವಾಸಕ್ಕೆ ಆಗಮಿಸಿ ರಾತೋರಾತ್ರಿ ಧರಣಿ ಆರಂಭಿಸಿದ್ದಾರೆ.

ಸಿಬಿಐ ಕಚೇರಿಗಳನ್ನು ಮತ್ತು ಸಿಬಿಐ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡುವುದನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಕೋಲ್ಕತ್ತಾಕ್ಕೆ ಹೆಚ್ಚುವರಿ ಕೇಂದ್ರೀಯ ಪಡೆಗಳನ್ನು ರವಾನಿಸಿದೆ .ಕೇಂದ್ರೀಯ ಪಡೆಗಳ ಆಗಮನದ ನಂತರ ಪೊಲೀಸರು ತಮ್ಮ ದಿಗ್ಬಂಧನವನ್ನು ತೆರವುಗೊಳಿಸಿದ್ದಾರೆ. ಪಶ್ಚಿಮ ಬಂಗಾಳದಾದ್ಯಂತ ಟಿಎಂಸಿ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದು ಕೇಂದ್ರ ಸರಕಾರ ಮೋದಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ .ಇನ್ನು ಸಿಬಿಐ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿ ನಡೆಗೆ ವಿರೋಧ ಪಕ್ಷಗಳು ಬೆಂಬಲ ಸೂಚಿಸಿದ್ದು ಹಲವಾರು ನಾಯಕರು ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿ ನಾವು ನಿಮ್ಮೊಂದಿಗಿದ್ದೇವೆ ಎಂಬ ಭರವಸೆಯನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.

Loading...

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಕೋಲ್ಕತ್ತಾದ ಸಿಬಿಐ ಕಚೇರಿಯಲ್ಲಿರುವ ದಾಖಲೆಗಳು ನಾಶವಾಗುವ ಆತಂಕವಿದೆ ಎಂದು ಸಿಬಿಐ ಹಂಗಾಮಿ ನಿರ್ದೇಶಕ ಎಂ ನಾಗೇಶ್ವರ ರಾವ್ ಹೇಳಿದ್ದಾರೆ .ಮಮತಾ ಬ್ಯಾನರ್ಜಿ ಸರಕಾರದ ನಡೆ ವಿರುದ್ಧ ಎಂದು ಸಿಬಿಐ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ

Leave a Reply

This site uses Akismet to reduce spam. Learn how your comment data is processed.