ಅಫ್ಜಲ್ ಗುರುವನ್ನು ಹುತಾತ್ಮ ಎಂದು ಬಿಂಬಿಸುವ ದೇಶದ್ರೋಹಿಗಳಿಗೆ ಯಾವ ಶಿಕ್ಷೆ ನೀಡಬೇಕು ?

ಈ ಸುದ್ದಿಯನ್ನು ಶೇರ್ ಮಾಡಿ

ಭಾರತದ ಸಂಸತ್ ಭವನದ ಮೇಲೆ ದಾಳಿ ಮಾಡಿ ಕ್ರೌರ್ಯ ಮೆರೆದಿದ್ದ ಮೊಹಮ್ಮದ್ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿ ಇಂದಿಗೆ ಆರು ವರ್ಷಗಳಾಗಿವೆ.ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಜಮ್ಮು ಕಾಶ್ಮೀರದ ಹಲವೆಡೆ ನಿರ್ಬಂಧ ಕೂಡ ಹೇರಲಾಗಿದೆ.ಶ್ರೀನಗರ ದಕ್ಷಿಣ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಪ್ರತ್ಯೇಕತಾವಾದಿಗಳು ಬಂದ್ಗೆ ಕರೆ ನೀಡಿದ್ದಾರೆ.ಪ್ರತ್ಯೇಕವಾದಿ ನಾಯಕರುಗಳಾದ ಸೈಯದ್ ಅಲಿ ಗಿಲಾನಿ ಮಿರ್ವಾಯಿಜ್ ಉಮರ್ ಫಾರೂಕ್ ದೇಶದ್ರೋಹಿ ಹೇಳಿಕೆ ನೀಡಿ ಅಫ್ಜಲ್ ಗುರು ಜಯಂತಿಯನ್ನು ಆಚರಿಸುತ್ತಿದ್ದಾರೆ. ಅಫ್ಜಲ್ ಗುರುವನ್ನು ಹುತಾತ್ಮನೆಂದು ಬಿಂಬಿಸಿ ಹೇಳಿಕೆಗಳನ್ನು ನೀಡುತ್ತಿರುವ ಇಂತಹ ದೇಶದ್ರೋಹಿಗಳಿಗೆ ಎಂತಹ ಶಿಕ್ಷೆ ನೀಡಿದರೂ ಕಮ್ಮಿಯೇ?ಸಂಸತ್ತಿನ ಮೇಲೆ ದಾಳಿ ನಡೆಸಿರುವ ಪ್ರಕರಣದಲ್ಲಿ ಅಫ್ಜಲ್ ಗುರು ಅಪರಾಧಿಯೆಂದು ಸಾಬೀತಾದ ಬಳಿಕ ರಾಜಧಾನಿ ದೆಹಲಿಯ ತಿಹಾರ್ ಜೈಲಿನಲ್ಲಿ 2013ರ ಫೆ.9 ರಂದು ಅಫ್ಜಲ್ ಗುರುನನ್ನು ಗಲ್ಲಿಗೇರಿಸಲಾಗಿತ್ತು.

Leave a Reply

This site uses Akismet to reduce spam. Learn how your comment data is processed.