ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಓರ್ವ ಯೋಧ ಹುತಾತ್ಮ ಹಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ : ಪುಲ್ವಾಮಾ ದಾಳಿಯ ನಂತರವೂ ಬುದ್ಧಿ ಕಲಿಯದ ಪಾಪಿ ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುವ ಮೂಲಕ ಇಂದು ಕೂಡ ಮೋಟಾರ್ ಶೆಲ್ಗಳ ದಾಳಿ ನಡೆಸಿದೆ .ಪಾಕಿಸ್ತಾನದ ಅಟ್ಟಹಾಸಕ್ಕೆ ಓರ್ವ ಯೋಧ ಹುತಾತ್ಮರಾಗಿದ್ದಾರೆ ಮತ್ತು ಮೂವರು ಯೋಧರಿಗೆ ಗಾಯಗಳಾಗಿವೆ .ಕಾಶ್ಮೀರದ ಸುಂದರ್ ಬನಿ ಸೆಕ್ಟರ್ ನ ಕೆರಿ ಬಟ್ಟಲ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆ ತೀವ್ರ ಗುಂಡಿನ ಚಕಮಕಿ ಮತ್ತು ಶೆಲ್ ದಾಳಿ ನಡೆಸುತ್ತಿದೆ. ಭಾರತೀಯ ಸೇನಾ ಕೂಡ ತೀಕ್ಷವಾದ ಪ್ರತಿಕ್ರಿಯೆ ನೀಡುತ್ತಿದೆ.

Leave a Reply

This site uses Akismet to reduce spam. Learn how your comment data is processed.