ಕದನ ವಿರಾಮ ಉಲ್ಲಂಘನೆಯಲ್ಲಿ ಮೃತಪಟ್ಟ ಇಬ್ಬರು ಪಾಕಿಸ್ತಾನಿ ಸೈನಿಕರ ಮೃತದೇಹವನ್ನು ಪಡೆಯಲ ಬಿಳಿ ಧ್ವಜವನ್ನು ಹಿಡಿದು ಬಂದ ಪಾಕಿಸ್ತಾನಿ ಸೈನಿಕರು

ಈ ಸುದ್ದಿಯನ್ನು ಶೇರ್ ಮಾಡಿ

ಭಾರತ ಪಾಕಿಸ್ತಾನ ಗಡಿಯಲ್ಲಿ ಸದಾ ಕಾಲು ಕೆರೆದು ಕದನ ವಿರಾಮ ಉಲ್ಲಂಘಿಸುವ ಪಾಕಿಸ್ತಾನಕ್ಕೆ ಭಾರತ ಅದರ ಭಾಷೆಯಲ್ಲಿ ಉತ್ತರ ನೀಡುತ್ತಿದೆ. ಇದರ ಪರಿಣಾಮ ಶುಕ್ರವಾರ ಗಡಿ ಭದ್ರತಾ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆಯಲ್ಲಿ ಮೃತಪಟ್ಟ ಇಬ್ಬರು ಪಾಕಿಸ್ತಾನಿ ಸೈನಿಕರ ಮೃತದೇಹವನ್ನು ಪಡೆಯಲು ಬಿಳಿ ಧ್ವಜವನ್ನು ಹಿಡಿದು ಪಾಕಿಸ್ತಾನಿ ಸೈನಿಕರು ಆಗಮಿಸಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ .ಸೆಪ್ಟೆಂಬರ್ 11 ರಂದು ಗಡಿಯಲ್ಲಿ ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತ ನೀಡಿದ ತಿರುಗೇಟಿನ ಇಬ್ಬರು ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದರು .ಮೃತಪಟ್ಟ ಓರ್ವ ಪಾಕಿಸ್ತಾನಿ ಸೈನಿಕರನ್ನು ಸಿಪಾಯಿ ಗುಲಾಮ್ ರಸೂಲ್ ಎಂದು ಗುರುತಿಸಲಾಗಿದ್ದು ಈ ಘಟನೆ ಹಾಜಿಪುರ್ ಗಡಿ ರೇಖೆಯ ಬಳಿ ನಡೆದಿದೆ ಎಂದು ವರದಿಯಾಗಿದೆ .ಘಟನೆ ಸಂಬಂಧಿಸಿ ವಿಡಿಯೋ ನೋಡಿ

Leave a Reply

This site uses Akismet to reduce spam. Learn how your comment data is processed.