ಬಾಂಗ್ಲಾದೇಶಿ ಗೋಕಳ್ಳರ ಮೇಲೆ ಗುಂಡು ಹಾರಿಸಿದ ಬಿಎಸ್ಎಫ್ ಯೋಧರು

ಈ ಸುದ್ದಿಯನ್ನು ಶೇರ್ ಮಾಡಿ

ದಕ್ಷಿಣ ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಭಾರತ ಬಾಂಗ್ಲಾ ಗಡಿ ಪ್ರದೇಶದಲ್ಲಿ ಗೋ ಕಳ್ಳ ಸಾಗಾಣಿಕೆದಾರರ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಓರ್ವ ಶಂಕಿತ ಬಾಂಗ್ಲಾದೇಶಿ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಬಿಎಸ್ಎಫ್ ಯೋಧರು ಗಸ್ತು ಕಾಯುತ್ತಿದ್ದ ವೇಳೆ ಮುಂಜಾನೆ ಒಂದರ ಸಮಯ ಮೂವತ್ತಕ್ಕೂ ಹೆಚ್ಚು ಬಾಂಗ್ಲಾದೇಶ ಪ್ರಜೆಗಳು ಅಕ್ರಮವಾಗಿ ಗಡಿ ನುಸುಳಲು ಯತ್ನಿಸಿದ ವೇಳೆ ಪಂಪ್ ಆ್ಯಕ್ಷನ್ ಗನ್ನಿಂದ ಪ್ರಹಾರ ನಡೆಸಿದ ಭದ್ರತಾ ಪಡೆಗಳ ದಾಳಿಗೆ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಣೀಂದ್ರ ದೇಬ್ ತಿಳಿಸಿದ್ದಾರೆ .ಈ ಗುಂಪಿನಲ್ಲಿದ್ದ ವ್ಯಕ್ತಿಗಳು ಭಾರತದ ಗಡಿಯೊಳಗೆ ನುಸುಳಿ ಅಕ್ರಮ ಗೋ ಸಾಗಾಟ ಮಾಡಲು ಬಂದಿದ್ದಾರೆ ಎಂದು ಶಂಕಿಸಲಾಗಿದ್ದು .ಒಂದು ಹಸುವನ್ನು ಬಿಎಸ್ಎಫ್ ವಶಪಡಿಸಿಕೊಂಡಿದೆ ಎಂದು ವರದಿ ಆಗಿದೆ.

Leave a Reply

This site uses Akismet to reduce spam. Learn how your comment data is processed.