ಪಾಕಿಸ್ತಾನದ ದುಸ್ಸಾಹಸವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಬಲ್ಲ 460 ಭೀಷ್ಮಾ ಟ್ಯಾಂಕ್ ಗಳು ಭಾರತೀಯ ಸೇನಾ ಪಡೆಗೆ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

ಭಾರತದ ಪಶ್ಚಿಮ ಗಡಿ ವಲಯದಲ್ಲಿ ಪಾಕಿಸ್ತಾನದ ಅಟ್ಟಹಾಸವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಬಲ್ಲ ರಷ್ಯಾ ಮೂಲದ 460 ಅತ್ಯಾಧುನಿಕ ‘ಟಿ – 90 ಭೀಷ್ಮ’ ಯುದ್ಧ ಟ್ಯಾಂಕ್‌ಗಳು ಭಾರತ ಸೇನಾ ಪಡೆಗೆ ಸೇರ್ಪಡೆಯಾಗುತ್ತಿದೆ.13,448 ಕೋಟಿ ರೂ. ಮೊತ್ತದ 460 ಟ್ಯಾಂಕ್‌ಗಳ ಸೇರ್ಪಡೆಯಿಂದ ಪಶ್ಚಿಮ ವಲಯದಲ್ಲಿ ಭಾರತೀಯ ಸೇನಾ ಸಾಮರ್ಥ್ಯಕ್ಕೆ ಭೀಮಬಲಬರಲಿದೆ. ರಷ್ಯಾ ಮೂಲದ 464 ಟಿ – 90 ಯುದ್ಧ ಟ್ಯಾಂಕ್‌ಗಳ ಮೇಲ್ದರ್ಜೆಗೇರಿಸುವ ಕಾರ್ಯವನ್ನು ಆವಡಿ ಹೆವಿ ವೆಹಿಕಲ್ಸ್ ಫ್ಯಾಕ್ಟರಿಗೆ ವಹಿಸಲು ಭದ್ರತಾ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.ಇತ್ತೀಚೆಗೆ ಪಾಕಿಸ್ತಾನ ಕೂಡ ರಷ್ಯಾದಿಂದ 360ಟಿ 90ಟ್ಯಾಂಕ್ ಗಳನ್ನು ಪಡೆಯಲು ಚರ್ಚಿಸುತ್ತಿದ್ದ ವೇಳೆ ಈ ಬೆಳವಣಿಗೆ ನಡೆದಿದೆ.ಭಾರತೀಯ ಸೇನೆಯ ಬಳಿ ಸೇನಾ ಬಳಿ ಈಗಾಗಲೇ ಸುಮಾರು 1,070 ಟಿ – 90 ಟ್ಯಾಂಕ್‌ಗಳು ಹಾಗೆಯೇ 124 ಅರ್ಜುನ್ ಟ್ಯಾಂಕ್‌ಗಳು ಮತ್ತು 2,400 ಹಳೆಯ ಟಿ – 72 ಟ್ಯಾಂಕ್‌ಗಳು ಇವೆ.

Leave a Reply

This site uses Akismet to reduce spam. Learn how your comment data is processed.