ಕಾಳಿಂಗ ಸರ್ಪ ಜೊತೆ ಹೋರಾಡಿ ಮಾಲೀಕನನ್ನು ರಕ್ಷಿಸಿ ಪ್ರಾಣ ತೆತ್ತ ನಾಯಿ

ಈ ಸುದ್ದಿಯನ್ನು ಶೇರ್ ಮಾಡಿ


ನಾಯಿಯೂ ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಮತ್ತೊಮ್ಮೆ ಸಾಬೀತಾಗಿದೆ. ತಮಿಳುನಾಡಿನ ಕುಂಭಕೋಣಂ ತಂಜಾವೂರು ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ರೈತ ನಟರಾಜನ್ (೫೦) ಅವರು ತಮ್ಮ ಹೊಲದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ತಮ್ಮ ನೆಚ್ಚಿನ ನಾಯಿ ಪಪ್ಪಿ ಕೂಡ ಇವರನ್ನು ಹಿಂಬಾಲಿಸಿ ಬಂದಿತ್ತು .ಈ ವೇಳೆ ಎದುರಾದ ಐದು ಅಡಿ ಉದ್ದವಾದ ಕಾಳಿಂಗ ಸರ್ಪ ರೈತ ನಟರಾಜ್ ಅವರ ಮೇಲೆ ದಾಳಿ ಮಾಡಲು ಸಿದ್ಧವಾಗಿತ್ತು. ಈ ಸಂದರ್ಭ ನಟರಾಜ್ ಅವರ ಸಾಕುನಾಯಿ ಕಾಳಿಂಗ ಸರ್ಪದ ಜೊತೆ ಬರೋಬ್ಬರಿ ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಡಿ ಕಾಳಿಂಗ ಸರ್ಪವನ್ನು ಕೊಂದು ಹಾಕಿದೆ.ಸೆಣಸಾಟದಲ್ಲಿ ಹಾವು ಹಲವು ಬಾರಿ ನಾಯಿಗೆ ಕಚ್ಚಿದ್ದು ನಂತರ ನಾಯಿ ಕೂಡ ಪ್ರಾಣ ಬಿಟ್ಟಿದೆ ಎಂದು ನಟರಾಜನ್ ದುಃಖದಿಂದ ಹೇಳಿದ್ದಾರೆ.ನಟರಾಜನ್ ಅವರ ಮನೆಯಲ್ಲಿ ಒಟ್ಟು ಹೆಂಡತಿ ಸೇರಿ ಇಬ್ಬರು ಮಕ್ಕಳಿದ್ದು ನಾಯಿಯನ್ನು ಕೂಡ ತನ್ನ ಮಕ್ಕಳಂತೆ ಸಾಕಿದ್ದರು.

Leave a Reply

This site uses Akismet to reduce spam. Learn how your comment data is processed.