ಸಹೋದ್ಯೋಗಿಳಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಸಿಆರ್ ಪಿಎಫ್ ಸಿಬ್ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು-ಕಾಶ್ಮೀರದ ಉಧಮ್ ಪುರ್ ಸಿಆರ್ ಪಿಎಫ್ ಕ್ಯಾಂಪ್ ನಲ್ಲಿ ಮಾರ್ಚ್ ೨೦ರಂದು ನಡೆದ ಘಟನೆಯಲ್ಲಿ ಮೂವರು ಸಿಆರ್ ಪಿಎಫ್ ಯೋಧರನ್ನು ಸಹೋದ್ಯೋಗಿಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವರದಿ ಆಗಿದೆ. 187 ನೇ ಬೆಟಾಲಿಯನ್ ನ ಸಿಆರ್ ಪಿಎಫ್ ಯೋಧರ ನಡುವೆ ವಾಗ್ವಾದ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಪೈಕಿ ಓರ್ವ ಸಿಆರ್ ಪಿಎಫ್ ಯೋಧ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದು, 3 ಯೋಧರು ಮೃತಪಟ್ಟಿದ್ದಾರೆ, ಘಟನೆ ನಂತರ ಆ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಸಿಆರ್ ಪಿಎಫ್ ಅಧಿಕಾರಿ ಹೇಳಿದ್ದಾರೆ.

Leave a Reply

This site uses Akismet to reduce spam. Learn how your comment data is processed.