ಚಂದ್ರಬಾಬು ನಾಯ್ಡುಗೆ ಶಾಶ್ವತವಾಗಿ ಎನ್ ಡಿಎ ಬಾಗಿಲು ಬಂದ್ ಮಾಡಿದ ಅಮಿತ್ ಶಾ

ಈ ಸುದ್ದಿಯನ್ನು ಶೇರ್ ಮಾಡಿ


ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪುನಃ ಎನ್ಡಿಎ ಬಾಗಿಲು ತಟ್ಟುವುದು ಖಚಿತವಾಗುತ್ತಿದ್ದಂತೆ ಚಂದ್ರಬಾಬು ನಾಯ್ಡು ಅವರನ್ನು ಯಾವ ಕಾರಣಕ್ಕೂ ಎನ್ ಡಿಎ ಮೈತ್ರಿ ಕೂಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸ್ಪಷ್ಟಪಡಿಸಿದ್ದಾರೆ.

ಆಂದ್ರಪ್ರದೇಶದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ಅಂಗವಾಗಿ ಪ್ರಜಾ ಚೈತನ್ಯ ಯಾತ್ರಾ ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, ಲೋಕಸಭೆ ಚುನಾವಣೆ ನಂತರ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ, ಎನ್ ಡಿಎ ಮೈತ್ರಿ ಕೂಟ ಸೇರಲು ಚಂದ್ರಬಾಬು ಮುಂದೆ ಬರುತ್ತಾರೆ, ಅವರಿಗೆ ಎಂದು ಹೇಳಿದ್ದಾರೆ.2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ನಾಯ್ಡು ಎನ್ ಡಿಎ ಮೈತ್ರಿ ಕೂಟ ಸೇರಿದ್ದರು, ಆದರೆ ಅವರ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತ ಜನರು ಅಸಮಾಧಾನ ವ್ಯಕ್ತ ಪಡಿಸಿದರು. ಈ ವೇಳೆ ನಾಯ್ಡು ಕೇಂದ್ರಸರ್ಕಾರ ಮತ್ತುಮೋದಿ ಅವರನ್ನು ಬೈಯ್ಯಲು ಆರಂಭಿಸಿದರು ಎಂಮ ಆರೋಪಿಸಿದ್ದಾರೆ,ಬಿಜೆಪಿಯನ್ನು ಬೈಯ್ಯುವ ಮೂಲಕ ನಾಯ್ಡು ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ, ತಮ್ಮ ಮಗ ಲೋಕೇಶ್ ನನ್ನು ಮುಖ್ಯಮಂತ್ರಿಯನ್ನಾಗಿಸಲು ಯತ್ನಿಸುತ್ತಿದ್ದಾರೆ ಎಂದು ಅಮಿತ್ ಶಾ ದೂರಿದ್ದಾರೆ.

Leave a Reply

This site uses Akismet to reduce spam. Learn how your comment data is processed.