ಮೋದಿ ಸರ್ಕಾರವನ್ನು ಪರೋಕ್ಷವಾಗಿ ಶ್ಲಾಘಿಸಿದ ವಾಯುಪಡೆ ಮುಖ್ಯಸ್ಥ ಬಿಎಸ್ ಧನೊವಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಪುಲ್ವಾಮಾ ದಾಳಿಗೆ ಪ್ರತಿರೋಧದ ವೈಮಾನಿಕ ದಾಳಿ ನಡೆಸುವ ವೇಳೆ ಪಾಕಿಸ್ತಾನದ ಬಂಧನಕ್ಕೆ ಒಳಗಾಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ವಾಪಸ್ ಕರೆತರುವಲ್ಲಿ ಕೇಂದ್ರ ಸರ್ಕಾರದ ನಾಯಕತ್ವವೇ ಪ್ರಮುಖ ಪಾತ್ರ ವಹಿಸಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿಎಸ್ ಧನೊವಾ ಸಮಾರಂಭವೊಂದರಲ್ಲಿ ಹೇಳಿದ್ದಾರೆ.ಅಭಿನಂದನ್ ಅವರ ತಂದೆ ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರಿಂದ ಅಭಿನಂದನೆ ಬಾಲಕನಿಂದಲೇ ನನಗೆ ಪರಿಚಿತ ಕಾರ್ಗಿಲ್ ಯುದ್ಧದ ವೇಳೆ ವಿಮಾನದಿಂದ ನೆಗೆದ ಕಮಾಂಡರ್ ಅಜಯ್ ಅಹುಜಾ ಪಾಕಿಸ್ತಾನ ಪ್ರದೇಶದಲ್ಲಿ ಇಳಿದಿದ್ದರೂ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು ಅಭಿನಂದನ್ ಕೂಡ ಇದೇ ರೀತಿ ಪಾಕಿಸ್ತಾನದ ವಶಕ್ಕೆ ಸಿಕ್ಕಾಗ ಇದೇ ಘಟನೆ ನಮ್ಮ ಮನದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ನಮ್ಮ ಕೇಂದ್ರದ ಸರ್ಕಾರದ ನಾಯಕತ್ವದ ದಿಟ್ಟ ನಡೆಯಿಂದ 60 ಗಂಟೆಯ ಒಳಗೆ ಅಭಿನಂದನ್ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಯಿತು ಎಂದು ಮೋದಿ ಸರಕಾರವನ್ನು ಬಿಎಸ್ ಧನೊವಾ ಪರೋಕ್ಷವಾಗಿ ಶ್ಲಾಘಿಸಿದ್ದಾರೆ.

Leave a Reply

This site uses Akismet to reduce spam. Learn how your comment data is processed.