ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ,ಮಂದಿರ ನಿರ್ಮಾಣ ,ಏಕರೂಪ ನಾಗರಿಕ ಸಂಹಿತೆ : 75 ಭರವಸೆಗಳನ್ನೊಳಗೊಂಡ 48 ಪುಟಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ


ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ೭೫ ಭರವಸೆಗಳನ್ನು ಒಳಗೊಂಡ 48ಪುಟಗಳ ಪ್ರಣಾಳಿಕೆಯಲ್ಲಿ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ, ಏಕರೂಪ ನಾಗರಿಕ ಸಂಹಿತೆ, ಪೌರತ್ವ ವಿಧೇಯಕ ಅಂಗೀಕಾರ, ಅಕ್ರಮ ಗಡಿ ನುಸುಳಿಕೆ ತಡೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಷಯಗಳು ಪ್ರಮುಖ ಸ್ಥಾನ ಪಡೆದಿದೆ .ಸಂಕಷ್ಟದ ಸುಳಿಗೆ ಸಿಲುಕಿರುವ ರೈತಾಪಿ ವರ್ಗಕ್ಕೆ ಸಹಾಯ ಹಸ್ತ ನೀಡುವ ಸಲುವಾಗಿ ಸಣ್ಣ ಮತ್ತು ಮಧ್ಯಮ ರೈತರಿಗೆ ಮಾಸಿಕ ಪಿಂಚಣಿ, 60 ವರ್ಷ ಮೇಲ್ಪಟ್ಟ ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ಸೌಲಭ್ಯ, ಜಿಎಸ್‌ಟಿ ಸರಳೀಕರಣ,ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದು, ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸುವುದು, ಭಯೋತ್ಪಾದನೆಯನ್ನು ಬೇರುಸಮೇತ ಕಿತ್ತೊಗೆಯಲು ಕಠಿಣ ಕ್ರಮ, ದೇಶದ ಎಲ್ಲಾ ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣಗೊಳಿಸುವುದು, ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ನೀಡಲು ರಾಷ್ಟ್ರೀಯ ವ್ಯಾಪಾರ ಆಯೋಗ ರಚನೆ, ಏಕರೂಪ ನೀತಿ ಸಂಹಿತೆ ಜಾರಿ, ಪೌರತ್ವ ಕಾಯ್ದೆಗೆ ತಿದ್ದುಪಡಿ ಸೇರಿದಂತೆ, ಹತ್ತು ಹಲವು ಭರವಸೆಗಳನ್ನು ದೇಶದ ಮತದಾರರ ಮುಂದಿಡಲಾಗಿದೆ.ದೇಶದ ಜನರಿಗೆ ವಿದ್ಯುತ್, ಶೌಚಾಲಯಗಳ ವ್ಯವಸ್ಥೆ, ಕುಡಿಯುವ ನೀರು, ಮುಂತಾದ ಮೂಲಭೂತ ಸೌಕರ್ಯಗಳನ್ನು ಮುಂದಿನ ಐದು ವರ್ಷಗಳಲ್ಲಿ ಕಲ್ಪಿಸಲಾಗುವುದು ಎಂದು ವಾಗ್ದಾನ ನೀಡಲಾಗಿದೆ.

ಸಂಕಲ್ಪ್ ಪತ್ರ’ದ ಹೆಸರಿನ ಚುನಾವಣಾ ಪ್ರಣಾಳಿಕೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದರು. ಪಕ್ಷದ ಅಧ್ಯಕ್ಷ ಅಮಿತ್ ಶಾ, ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಸುಷ್ಮ ಸ್ವರಾಜ್, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Loading...

Leave a Reply

This site uses Akismet to reduce spam. Learn how your comment data is processed.