ಜುಟ್ಟು ಹಿಡಿದು ಪುಂಡಾಟ ಮೆರೆದ ಎಡಪಂಥೀಯ ವಿದ್ಯಾರ್ಥಿಯನ್ನು ಕ್ಷಮಿಸಿದ ಬಿಜೆಪಿ ಕೇಂದ್ರ ಸಚಿವ ಯಾಕೆ ಗೊತ್ತೇ ?

ಈ ಸುದ್ದಿಯನ್ನು ಶೇರ್ ಮಾಡಿ

ಪಶ್ಚಿಮ ಬಂಗಾಳ ಬಿಜೆಪಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಗುರುವಾರ ಜಾಧವಪುರ ವಿವಿಗೆ ಆಗಮಿಸಿದ್ದ ಸಂದರ್ಭ ಬಾಬುಲ್ ಸುಪ್ರಿಯೋ ಅವರನ್ನು ವಿರೋಧಿಸಿ ಎಡಪಂಥೀಯ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಓರ್ವ ವಿದ್ಯಾರ್ಥಿ ಬಾಬುಲ್ ಸುಪ್ರಿಯೊ ಅವರ ಜುಟ್ಟನ್ನು ಹಿಡಿದು ಎಳೆದಾಡಿದ್ದ ಘಟನೆ ರಾಷ್ಟ್ರೀಯ ಮಾಧ್ಯಮದಲ್ಲಿ ಸೇರಿ ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು .ಅಲ್ಲದೇ ಸಚಿವರು ಪುಂಡಾಟ ಮೆರೆದ ವಿದ್ಯಾರ್ಥಿಯನ್ನು ಜೈಲಿಗೆ ಅಟ್ಟುವುದಾಗಿ ತಿಳಿಸಿದ್ದರು .ತಮ್ಮ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳು ವಿದ್ಯಾರ್ಥಿಗಳು ಆಗಿರಲು ಸಾಧ್ಯವಿಲ್ಲ, ಅವರು ಗೂಂಡಾಗಳು ಮಾನಸಿಕ ಅಸ್ವಸ್ಥ ಶಿಬಿರಕ್ಕೆ ಕಳುಹಿಸಬೇಕು ಅಲ್ಲದೆ ತನ್ನ ಜುಟ್ಟನ್ನು ಹಿಡಿದ ವಿದ್ಯಾರ್ಥಿಯನ್ನು ನಕ್ಸಲೀಯ ಎಂದು ಜರಿದಿದ್ದರು .ಸಚಿವ ಬಾಬುಲ್ ಸುಪ್ರಿಯೋ ತಮ್ಮ ಕಾನೂನು ಹೋರಾಟಕ್ಕೆ ಎಲ್ಲ ಸಿದ್ಧತೆ ನಡೆಸುತ್ತಿದ್ದ ವೇಳೆ ಜುಟ್ಟು ಹಿಡಿದು ಮಗನ ತಾಯಿ ಅಮ್ಮ ಮಗನನ್ನು ಕ್ಪಮಿಸುವಂತೆ ಮನವಿ ಮಾಡಿದ್ದಾರೆ .ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಸಚಿವರು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕ್ಷಮಿಸಿದ್ದೇನೆ ಆತನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಆತನ ತಾಯಿಗೆ ಕ್ಯಾನ್ಸರ್ ಇದೆ ಆತ ಆಕೆಯ ಆರೈಕೆ ಆದ್ಯತೆ ನೀಡಲಿ ಎಂದು ಹೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ .ಬಾಬುಲ್ ಸುಪ್ರಿಯೋ ಅವರ ಕಾರ್ಯವೈಖರಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ .ತಾಯಿ ಏನಂದಿದ್ದರೆ ನೋಡಿ

Leave a Reply

This site uses Akismet to reduce spam. Learn how your comment data is processed.