ಅಸ್ಸಾಂ : ಗೋಮಾಂಸ ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿ ಹಂದಿ ಮಾಂಸ ತಿನ್ನಿಸಿದ ಗುಂಪು

ಈ ಸುದ್ದಿಯನ್ನು ಶೇರ್ ಮಾಡಿ

ಅಸ್ಸಾಂನಲ್ಲಿ ನಡೆದ ಘಟನೆಯೊಂದರಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಗುಂಪೊಂದು ದಾಳಿ ನಡೆಸಿ ಬಲವಂತವಾಗಿ ಹಂದಿ ಮಾಂಸವನ್ನು ತಿನ್ನಿಸಿದ ಘಟನೆ ವರದಿಯಾಗಿದೆ.ದಾಳಿಗೊಳಗಾದ ಮುಸ್ಲಿಂ ವ್ಯಕ್ತಿಯನ್ನು 68 ವರ್ಷದ ಶೌಕತ್ ಅಲಿ ಎಂದು ಗುರುತಿಸಲಾಗಿದೆ.ಈ ಘಟನೆ ಏಪ್ರಿಲ್ 7 ರಂದು ಅಸ್ಸಾಂನ ಬಿಶ್ವಾಂತ್ ಚಾರಿಯಲಿ ಪ್ರದೇಶದಲ್ಲಿ ನಡೆದಿದ್ದು. ಶೌಕತ್ ಆಲಿ ಗೋಮಾಂಸ ಮಾರಾಟ ಮಾಡುತ್ತಿದ್ದಾಗ ಆಕ್ರೋಶಗೊಂಡ ಗುಂಪೊಂದು ನೀನು ಬಾಂಗ್ಲಾದೇಶಿ ಅಥವಾ ವಲಸೆ ಬಂದವನೇ ಎಂದು ವಿಚಾರಣೆ ನಡೆಸಿ ಹಲ್ಲೆ ಮಾಡಿದೆ, ಮತ್ತು ಬಲವಂತವಾಗಿ ಹಂದಿ ಮಾಂಸವನ್ನು ತಿನ್ನಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸ್ಥಳೀಯ ಪೊಲೀಸರ ಪ್ರಕಾರ ಶೌಕತ್ ಆಲಿ ಮಾಂಸ ಮಾರಾಟಗಾರ ನಾಗಿದ್ದು ಹಲವಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ ಇನ್ನು ಘಟನೆ ಸಂಬಂಧಿಸಿ ವಿಡಿಯೋ ಇಲ್ಲಿದೆ ನೋಡಿ .

Leave a Reply

This site uses Akismet to reduce spam. Learn how your comment data is processed.