“ರಾಜಸ್ತಾನದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಬಿಜೆಪಿಯ ಪ್ರತಿರೂಪವಾಗಿದೆ” ಅಸಾದುದ್ದೀನ್ ಒವೈಸಿ

ಈ ಸುದ್ದಿಯನ್ನು ಶೇರ್ ಮಾಡಿ

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ .ರಾಜಸ್ಥಾನದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಬಿಜೆಪಿಯ ಪ್ರತಿರೂಪವಾಗಿದೆ ಎಂದು ಕೆಂಡ ಕಾರಿದ್ದಾರೆ.ಇದಕ್ಕೆ ಪ್ರಮುಖ ಕಾರಣವೆಂದರೆ 2017 ರಲ್ಲಿ ಅಲ್ವಾರ್ ನಲ್ಲಿ ಗೋ ಸಾಗಾಟ ವಿಚಾರವಾಗಿ ಪೆಹ್ಲು ಖಾನ್ ಎಂಬ ವ್ಯಕ್ತಿಯನ್ನು ಸಾಮೂಹಿಕವಾಗಿ ಹಲ್ಲೆ ನಡೆಸಲಾಗಿತ್ತು.ಘಟನೆಯಲ್ಲಿ ಪೆಹ್ಲು ಖಾನ್ ಹತ್ಯೆಗೀಡಾಗಿದ್ದರು. ಇದೀಗ ರಾಜಸ್ಥಾನ ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಪೆಹ್ಲು ಖಾನ್ ಅಕ್ರಮ ಗೋ ಸಾಗಾಟ ದಂಧೆಯಲ್ಲಿ ಭಾಗಿಯಾಗಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ . ರಾಜಸ್ಥಾನದ ಮುಸ್ಲಿಂ ಸಮುದಾಯ ಕಾಂಗ್ರೆಸ್ ಅನ್ನು ಬಹಿಷ್ಕರಿಸುವಂತೆ ಓವೈಸಿ ಕರೆ ಕರೆ ನೀಡಿದ್ದಾರೆ ಅಲ್ಲದೇ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯ ಏಜೆಂಟ್ ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ .

Loading...

Leave a Reply

This site uses Akismet to reduce spam. Learn how your comment data is processed.