ವೀರಯೋಧ ಔರಂಗಜೇಬ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ


ಶ್ರೀನಗರ : ಜೂನ್2018 ರಲ್ಲಿ ಪುಲ್ವಾಮಾ ಜಿಲ್ಲೆಯಿಂದ ಉಗ್ರರಿಂದ ಅಪಹರಣಕ್ಕೀಡಾಗಿ ಹತ್ಯೆಗೊಂಡ ವೀರಯೋಧ ಔರಂಗಜೇಬ ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.ಪ್ರಕರಣಕ್ಕೆ ಸಂಬಂಧಿಸಿ 44ರಾಷ್ಟ್ರೀಯ ರೈಫಲ್ಸ್ ಮೂವರು ಯೋಧರನ್ನು ಬಂಧಿಸಲಾಗಿದೆ. ಬಂಧಿತರು ಔರಂಗಜೇಬ್ ಚಲನವಲನದ ಕುರಿತಾದ ಮಾಹಿತಿಯನ್ನು ಉಗ್ರರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಹೆಸರನ್ನು ಸೇನಾ ಮೂಲಗಳು ಈ ವರೆಗೆ ಬಹಿರಂಗ ಪಡಿಸಿಲ್ಲ ತನಿಖೆಯ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ .ಯೋಧನ ಸಾವಿನ ನಂತರ ಕುಟುಂಬ ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರ ಸರ್ಕಾರಕ್ಕೆ ರಾಜ್ಯದಲ್ಲಿ ಉಗ್ರಗಾಮಿಗಳನ್ನು ಹತ್ತಿಕ್ಕುವಂತೆ ಮನವಿ ಮಾಡಿತ್ತು.ಕಳೆದ ಗಣರಾಜ್ಯೋತ್ಸವದಲ್ಲಿ ಯೋಧ ಔರಂಗಜೇಬ್ ಗೆ ಮರಣೋತ್ತರ ಶೌರ್ಯಚಕ್ರ ಪದಕ ನೀಡಿ ಗೌರವಿಸಿತ್ತು.

Leave a Reply

This site uses Akismet to reduce spam. Learn how your comment data is processed.