ಕಾಶ್ಮೀರದಲ್ಲಿ ಅಮಿತ್ ಶಾ :30 ವರ್ಷದ ನಂತರ ಮೊದಲ ಬಾರಿಗೆ ಯಾವುದೇ ಬಂದ್ ಕರೆನೀಡದ ಪ್ರತ್ಯೇಕವಾದಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಕೇಂದ್ರದಲ್ಲಿ ಅಮಿತ್ ಶಾ ಅವರು ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಎರಡು ದಿನಗಳ ಕಾಲದ ಅಧಿಕೃತ ಭೇಟಿಗಾಗಿ ಜಮ್ಮು ಕಾಶ್ಮೀರಕ್ಕೆ ತೆರಳಿದ್ದಾರೆ. ಅಮರನಾಥ ಯಾತ್ರೆಯ ಭದ್ರತಾ ವ್ಯವಸ್ಥೆಗಳ ಪರಿಶೀಲನಾ ಸಭೆಯನ್ನು ನಡೆಸಿದ ಅವರು ಹಿಂಸಾಚಾರ ರಹಿತ ಯಾತ್ರೆಯನ್ನು ಖಾತ್ರಿಪಡಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ಭದ್ರತಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ.ಇನ್ನು ಕೇಂದ್ರ ಸರಕಾರದ ಕಟು ನಿಲುವಿಗೆ ತಲೆ ಬಾಗಿದ ಪ್ರತ್ಯೇಕ ವಾದಿಗಳು ಮಾತುಕತೆ ನಡೆಸಲು ಸಿದ್ದರಾಗಿದ್ದಾರೆ.ಇನ್ನು ಗಮನಿಸ ಬೇಕಾದ ಪ್ರಮುಖ ಅಂಶ ಎಂದರೆ ಈ ಹಿಂದೆ ಗ್ರಹ ಸಚಿವರು ಕಾಶ್ಮೀರಕ್ಕೆ ಭೇಟಿ ನೀಡುವ ಸಂದರ್ಭ ಪ್ರತ್ಯೇಕ ವಾದಿಗಳು ಕಣಿವೆಯಲ್ಲಿ ಬಂದ್ಗೆ ಕರೆ ನೀಡಿ ಶಾಂತಿ ಕೆಡವಲು ಪ್ರಯತ್ನಿಸುತ್ತಿದ್ದರು ಆದರೆ ಈ ಬಾರಿ ಯಾವುದೇ ಬಂದ್ ಕರೆನೀಡದೆ ಕೇಂದ್ರ ಸರ್ಕಾರಕ್ಕೆ ತಲೆ ಬಾಗಿದಂತಿದ್ದು .30 ವರ್ಷದ ನಂತರ ಮೊದಲ ಬಾರಿಗೆ ಪ್ರತ್ಯೇಕವಾದಿಗಳು ಈ ರೀತಿ ನಡೆದುಕೊಂಡಿದ್ದಾರೆ.

Leave a Reply

This site uses Akismet to reduce spam. Learn how your comment data is processed.