7 ಮಸೀದಿಗಳಿಗೆ ಬೀಗ ಜಡಿದು ಇಮಾಮಗಳನ್ನು ಗಡಿಪಾರು ಮಾಡಿದ ಆಸ್ಟ್ರಿಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಮದ್ಯ ಯುರೋಪ್ನ ಆಸ್ಟ್ರಿಯಾದಲ್ಲಿ ಮುಸ್ಲಿಂ ತೀವ್ರಗಾಮಿ ತನದ ವಿರುದ್ಧ ಆಸ್ಟ್ರೀಯ ಸರ್ಕಾರ ಸಮರ ಸಾರಿದೆ .ತನ್ನ ದೇಶದಲ್ಲಿ ಮುಸ್ಲಿಂ ತೀವ್ರಗಾಮಿ ತನಕ್ಕೆ ಕುಮ್ಮಕ್ಕು ನೀಡಿದ ಏಳು ಮಸೀದಿಗಳನ್ನು ಬಂದ್ ಮಾಡಿ ಅದರಲ್ಲಿನ ಇಮಾಮ್ಗಳನ್ನು ಗಡಿಪಾರು ಮಾಡಲು ಆದೇಶಿಸಲಾಗಿದೆ.ಆಸ್ಟ್ರಿಯಾದಲ್ಲಿ ಇತ್ತೀಚೆಗೆ ಆಡಳಿತಕ್ಕೆ ಬಂದ ಸಮ್ಮಿಶ್ರ ಸರ್ಕಾರ ದೇಶದಲ್ಲಿರುವ ಇಸ್ಲಾಂ ಮೂಲಭೂತವಾದಿಗಳು ಮತ್ತು ತೀವ್ರಗಾಮಿ ಗುಂಪುಗಳಿಗೆ ವಿದೇಶದಿಂದ ಹರಿದು ಬರುವ ಹಣದ ಮೂಲಗಳಿಗೆ ತಡೆ ಒಡ್ಡುತ್ತ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ವರದಿಯಾಗಿದೆ.ಟರ್ಕಿಶ್ ಮೂಲಭೂತವಾದಿಗಳು ಆಸ್ಟ್ರೀಯಾದಲ್ಲಿ ಹುಟ್ಟುಹಾಕಿದ ಮುಸ್ಲಿಂ ತೀವ್ರಗಾಮಿತನವನ್ನು ನಿರ್ನಾಮ ಮಾಡಲಾಗುವುದು ಎಂದು ಚಾನ್ಸಿಲರ್ ಸೆಬಾಸ್ಟಿಯನ್ ಕ್ರೂಸ್ ತಿಳಿಸಿದ್ದಾರೆ.ಇತ್ತೀಚೆಗೆ ಆಡಳಿತಕ್ಕೆ ಬಂದ ಸಮ್ಮಿಶ್ರ ಸರ್ಕಾರ ಅಕ್ರಮ ವಲಸಿಗರು ಮತ್ತು ತೀವ್ರಗಾಮಿ ತನದ ವಿರುದ್ಧ ಕಠಿಣ ನಿಲುವು ತೋರಿದ್ದು ಟರ್ಕಿಯ ಮುಸ್ಲಿಂ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.


news source:independent.co.uk

Leave a Reply

This site uses Akismet to reduce spam. Learn how your comment data is processed.