ಉಳಾಯಿಬೆಟ್ಟು ಪ್ರಕರಣ :ಆರೋಪಿಗಳನ್ನು ಬಚಾವ್ ಮಾಡಿದ ರಾಜ್ಯ ಸರ್ಕಾರ !

ಈ ಸುದ್ದಿಯನ್ನು ಶೇರ್ ಮಾಡಿ


ಮಂಗಳೂರು : ರಾಜ್ಯ ಸರ್ಕಾರ ಒಟ್ಟು 142 ಪ್ರಕರಣಗಳನ್ನು ವಾಪಸ್ ಪಡೆದಿದ್ದು ಇದರಲ್ಲಿ ಪ್ರಮುಖವಾಗಿ ಮಂಗಳೂರು ತಾಲ್ಲೂಕಿನ ಉಳಾಯಿಬೆಟ್ಟಿನಲ್ಲಿ ಐದು ವರ್ಷಗಳ ಹಿಂದೆ ಮತಾಂದ ದುಷ್ಕರ್ಮಿಗಳು ಮಾನಭಂಗ ಸೇರಿ ಕೊಲೆ ಯತ್ನ ನಡೆಸಿದ ಆರೋಪಿಗಳು ಬಚಾವಾಗಿದ್ದಾರೆ.ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ದಕ್ಷಿಣ ಕನ್ನಡದಲ್ಲಿ ವ್ಯಾಪಕ ಆಕ್ರೋಶ ಕೇಳಿಬಂದಿದೆ .ಒಟ್ಟು ಮೂರು ಹಂತಗಳಲ್ಲಿ ರಾಜ್ಯ ಸರ್ಕಾರ ಈ 142 ಪ್ರಕರಣಗಳನ್ನು ರದ್ದುಗೊಳಿಸಿ. ಹೆಚ್ಚಿನ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ವಿವಿಧ ಹಂತದಲ್ಲಿದ್ದು, ಇನ್ನು ಉಳಾಯಿಬೆಟ್ಟು ಪ್ರಕರಣ 2014 ಡಿಸೆಂಬರ್ ತಿಂಗಳಿನಲ್ಲಿ ನಡೆದಿತ್ತು.

ಯುವತಿಯೊಬ್ಬಳು ತಾಯಿ ಮತ್ತು ಸಹೋದ್ಯೋಗಿಯ ಜತೆ ಮಂಗಳೂರು ತಾಲ್ಲೂಕಿನ ಉಲಾಯಿಬೆಟ್ಟು ಬಳಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಮತಾಂದ ಯುವಕರ ಗುಂಪೊಂದು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿ ಮಾನಭಂಗ ಗೊಳಿಸಿದ್ದು ಅಲ್ಲದೆ ಆಟೊರಿಕ್ಷಾ ಬೈಕ್ ಹಾನಿಗೊಳಿಸಿ ಚಿನ್ನದ ಸರಗಳನ್ನು ಅಪಹರಿಸಿದ್ದರು. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು .ಹಿಂದೂ ಸಂಘಟನೆಗಳು ಸೇರಿ ಬಿಜೆಪಿ ಉಲಾಯಿಬೆಟ್ಟು ಪ್ರಕರಣದ ವಿರುದ್ಧ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೀದಿಗೆ ಇಳಿದಿದ್ದವು.

Leave a Reply

This site uses Akismet to reduce spam. Learn how your comment data is processed.