ತೊಕ್ಕೊಟ್ಟು ಚೆಂಬುಗುಡ್ಡೆ ಪರಿಸರದಲ್ಲಿ ನಡೆಯುತ್ತಿದೆಯೇ ವಿಸ್ಮಯ ?

ಈ ಸುದ್ದಿಯನ್ನು ಶೇರ್ ಮಾಡಿ

ಭೂತಾರಾಧನೆ,ದೈವಾರಾಧನೆ‌ ಮತ್ತು ನಾಗಾರಾಧನೆ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಪರಿಸರದಲ್ಲಿ ಕುತೂಹಲಕಾರಿ ಸಂಗತಿ ಒಂದು ಬೆಳಕಿಗೆ ಬಂದಿದೆ. ತೊಕ್ಕೊಟ್ಟು ಕೊಣಾಜೆ ರಸ್ತೆ ಬಳಿ ಸುಮಾರು ಐದು ವರ್ಷಗಳ ಹಿಂದೆ ಜೆಸಿಬಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಮೇಲಿಂದ ಬಂಡೆ ಒಂದು ಬಿದ್ದು ಜೆಸಿಬಿ ಚಾಲಕ ಮತ್ತು ಸಹಾಯಕ ಸ್ಥಳದಲ್ಲಿ ಮೃತಪಟ್ಟಿರುವ ಸಂಗತಿ ಈಗ ಹಳೆಯದಾದರೂ ಸ್ಥಳದಲ್ಲಿ ನಾಗನ ಹೆಡೆಯ ರೂಪದಲ್ಲಿ ನಿಂತಿರುವ ಮಣ್ಣಿನ ಗುಡ್ಡೆ ಜಡಿಮಳೆಗೂ ಬೀಳದೆ ಭೂಕುಸಿತ ಕಾಣದೆ ವಿಸ್ಮಯವನ್ನು ಉಂಟುಮಾಡಿದೆ, ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಪರಿಸರದಲ್ಲಿ ಜನರ ಬಾಯಲ್ಲಿ ನಾಗದೇವರ ಕಾರ್ಣಿಕದ ಬಗ್ಗೆ ಇದು ಮನೆಮಾತಾಗಿದ್ದು , ವಿಚಿತ್ರ ಎಂಬಂತೆ ಇದರ ಮೇಲೆ ಅರಳಿಮರ ಒಂದು ಬೆಳೆಯುತ್ತಿರುವುದು ಇನ್ನೂ ವಿಸ್ಮಯಕರ ವಾಗಿದೆ.

Leave a Reply

This site uses Akismet to reduce spam. Learn how your comment data is processed.