ಮಂಗಳೂರು ಕರುವಿನ ಜತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ತಲೆಮರೆಸಿಕೊಂಡ ಆರೋಪಿ :ಯುವಕನಿಗೆ ಗೂಸಾ ನೀಡಿದ 3 ಯುವಕರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು : ಜಾರ್ಖಂಡ್ ಮೂಲದ ಯುವಕನೊಬ್ಬ ನಗರದ ಕಾವೂರಿನ ಕುಂಜತ್ತ ಬೈಲ್ ಬಳಿ ಕರುವಿನ ಜತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪ್ರಕರಣದ ಆರೋಪಿಯಾದ ಮೊಹಮ್ಮದ್ ಅನ್ಸಾರಿ ತಲೆಮರೆಸಿಕೊಂಡಿದ್ದು, ಆರೋಪಿಯ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಅಭಿ, ಸುಶಾಂತ್ ಮತ್ತು ಪ್ರಜ್ವಲ್ ಎಂಬ ಯುವಕರನ್ನು ಬಂಧಿಸಲಾಗಿದೆ .ಕುಂಜತ್ತಬೈಲ್ ಬಯಲು ಪ್ರದೇಶದಲ್ಲಿ ಮೇಯಲು ಬಿಟ್ಟಿದ್ದ ಕರುವಿಗೆ ಯುವಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದನ್ನು ಕಂಡು ರೊಚ್ಚಿಗೆದ್ದ ಸ್ಥಳೀಯ ಯುವಕರು ಮೊಹಮ್ಮದ್ ಅನ್ಸಾರಿಯನ್ನು ಹಿಡಿದು ಥಳಿಸಿದ್ದರು ಘಟನೆ ಸಂಬಂಧಿಸಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Leave a Reply

This site uses Akismet to reduce spam. Learn how your comment data is processed.