ತಾಂತ್ರಿಕ ದೋಷದಿಂದ ಸಾರಿಗೆ ಮಿಗ್ 17 ಪತನ : ನಾವೇ ಹೊಡೆದುರುಳಿಸಿದ್ದೇವೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಪಾಕಿಸ್ತಾನ ಮಾಧ್ಯಮ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಭಾರತೀಯ ವಾಯುಸೇನೆಯ ಮಿಗ್ 17 ಪತನಗೊಂಡಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.ಬುದ್ಘಾಮ್‌ ಜಿಲ್ಲೆಯ ಗರೆಂಡ್‌ ಕಾಲಾನ್‌ ಗ್ರಾಮದ ಸಮೀಪದ ಜೆಟ್‌ ಪತನಗೊಂಡಿದೆ. ಬೆಳಗ್ಗೆ 10.05 ಗಂಟೆಗೆ ಜೆಟ್‌ ಪತನಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪತನಗೊಂಡ ಜೆಟ್‌ ಐಎಎಫ್‌ನ ಮಿಗ್‌ 17 ಸಾರಿಗೆ ಜೆಟ್‌ ಎಂದು ಗುರುತಿಸಲಾಗಿದೆ.

ಇಂದು ಗಡಿ ಪ್ರದೇಶದಲ್ಲಿ ಭಾರತೀಯ ಗಡಿಯನ್ನು ಒಳನುಸುಳಲು ಯತ್ನಿಸಿದ ಮೂರು F- 16 ಪಾಕಿಸ್ತಾನ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಿದೆ.ಆದರೆ ಪಾಕಿಸ್ತಾನ ಮಾಧ್ಯಮಗಳು ಮಾತ್ರ ಭಾರತೀಯ ಯುದ್ಧ ವಿಮಾನವನ್ನು ನಾವೇ ಹೊಡೆದುರುಳಿಸಿದ್ದೇವೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿಸುತ್ತಿದೆ.

Loading...

Leave a Reply

This site uses Akismet to reduce spam. Learn how your comment data is processed.