ಮೋದಿ ಸರ್ಕಾರಕ್ಕೆ ಮತ್ತೊಂದು ಗೆಲುವು ಉದ್ಯಮಿ ಮಲ್ಯ ಗಡಿಪಾರಿಗೆ ಬ್ರಿಟನ್ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

ಭಾರತದ ವಿವಿಧ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಲಂಡನ್ನಲ್ಲಿ ನೆಲೆಸಿರುವ ವಿಜಯ ಮಲ್ಯ ಅವರನ್ನು ಗಡೀಪಾರು ಮಾಡಲು ಬ್ರಿಟನ್ ಒಪ್ಪಿಗೆ ನೀಡಿದೆ .ಉದ್ಯಮಿ ವಿಜಯ ಮಲ್ಯ ಗಡಿಪಾರು ಮಾಡುವ ಪತ್ರಕ್ಕೆ ಬ್ರಿಟನ್ ಗೃಹ ಕಾರ್ಯದರ್ಶಿ ಸಹಿ ಹಾಕಿದ್ದಾರೆ. ಇದರಿಂದಾಗಿ ವಿಜಯ ಮಲ್ಯ ಅವರಿಗೆ ಹೊಸ ಸಂಕಷ್ಟ ಎದುರಾಗಿದ್ದು, ಭಾರತಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿದೆ.ಲಂಡನ್‌ನ ವೆಸ್ಟ್ ಮಿನಿಸ್ಟರ್ ಕೋರ್ಟ್ ವಿಜಯ ಮಲ್ಯ ಗಡಿಪಾರಿಗೆ ಒಪ್ಪಿಗೆ ನೀಡಿತ್ತು. ಕೋರ್ಟ್ ಆದೇಶದ ಪ್ರತಿ ಬ್ರಿಟನ್ ಗೃಹ ಕಾರ್ಯದರ್ಶಿಗೆ ತಲುಪಿತ್ತು. ಅವರು ಇಂದು ಗಡಿಪಾರಿಗೆ ಒಪ್ಪಿಗೆ ನೀಡಿ, ನ್ಯಾಯಾಲಯದ ಆದೇಶ ಪ್ರತಿಗೆ ಸಹಿ ಹಾಕಿದ್ದಾರೆ.

Leave a Reply

This site uses Akismet to reduce spam. Learn how your comment data is processed.