ಇಸ್ರೇಲ್ ಮೇಲೆ ಹಮ್ಮಸ್ ಉಗ್ರರಿಂದ ರಾಕೆಟ್ ದಾಳಿ: ದಾಳಿ ನಡೆಸಿದ ಒಂದು ಗಂಟೆ ಒಳಗೆ ಪ್ರತಿಕಾರ ತೆಗೆದುಕೊಂಡ ಇಸ್ರೇಲ್ ವಾಯುಪಡೆ

ಈ ಸುದ್ದಿಯನ್ನು ಶೇರ್ ಮಾಡಿ

ಪ್ಯಾಲೆಸ್ತೀನ್ ಇಸ್ರೇಲ್ ಗಡಿ ಪ್ರದೇಶದ ಗಾಝ ಪ್ರದೇಶದಿಂದ ಹಮಾಸ್ ಬಂಡುಕೋರರು ಇಸ್ರೇಲ್ ವಿರುದ್ಧ ಗುರುವಾರ ಎರಡು ರಾಕೆಟ್ ದಾಳಿ ನಡೆಸಿದ್ದಾರೆ.ಈ ರಾಕೆಟ್ ಗಳ ಪೈಕಿ ಒಂದು ರಾಕೆಟ್ ಅನ್ನು ಇಸ್ರೇಲ್ ಆಗಸದಲ್ಲಿ ಹೊಡೆದುರುಳಿಸಿದೆ ಇನ್ನೊಂದು ರಾಕೆಟ್ ಖಾಲಿ ಪ್ರದೇಶಕ್ಕೆ ಬಿದ್ದಿದೆ ಎಂದು ಇಸ್ರೇಲ್ ಸೇನೆ ಸ್ಪಷ್ಟಪಡಿಸಿದೆ.2014 ರ ನಂತರ ಇಸ್ರೇಲ್ ಬಂಡುಕೋರರು ಇದೇ ಮೊದಲ ಬಾರಿಗೆ ಈ ರೀತಿಯ ಅಟ್ಟಹಾಸ ಮೆರೆದಿದ್ದಾರೆ.ರಾಕೆಟ್ ದಾಳಿ ಒಂದು ಗಂಟೆಯ ಒಳಗೆ ಇಸ್ರೇಲ್ ವಾಯುಸೇನೆ ಗಾಝದ ಮೇಲೆ ದಾಳಿ ದಾಳಿ ನಡೆಸಿ ಉಗ್ರರ ನೆಲೆಯನ್ನು ಧ್ವಂಸಗೊಳಿಸಿದೆ ಎಂದು ಪ್ಯಾಲೆಸ್ತೀನ್ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಅಲ್ಜಜೀರಾ ವರದಿ ಮಾಡಿದೆ.ಹಮ್ಮಸ್ ಉಗ್ರರ ಶಿಬಿರವನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ಪಡೆ ಸುಮಾರು ಮೂವತ್ತು ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿದೆ .ದಕ್ಷಿಣ ಗಾಝ ಪ್ರದೇಶದಲ್ಲಿ ಈ ವೈಮಾನಿಕ ದಾಳಿ ನಡೆದಿದೆ ಎಂದು ವರದಿಗಳು ತಿಳಿಸಿವೆ.

Leave a Reply

This site uses Akismet to reduce spam. Learn how your comment data is processed.