ಇಸ್ರೇಲ್ ತಂಟೆಗೆ ಬಂದರೆ ಇಲ್ಲವಾಗಿಸುತ್ತೇವೆ : ಉಗ್ರ ಸಂಘಟನೆಗೆ ಪ್ರಧಾನಿ ನೆತಾನ್ಯಾಹು ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ರೇಲ್ ದೇಶವನ್ನು ನಾಶಗೊಳಿಸಲು ಲೆಬನಾನ್ ಸಮರ್ಥವಾಗಿದೆ ಎಂದು ಲೆಬನಾನ್ ಮೂಲದ ಉಗ್ರ ಸಂಘಟನೆಯೊಂದು ನೀಡಿರುವ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಕಿಡಿಕಾರಿದ್ದು, ‘ಇಸ್ರೇಲ್ ತಂಟೆಗೆ ಬಂದರೆ ನಿಮ್ಮನ್ನು ನಾಶ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. “ಇಸ್ರೇಲ್ ಮೇಲೆ ದಾಳಿಯಂತಹ ಮೂರ್ಖ ಕೆಲಸಕ್ಕೆ ಹಿಜ್ಬುಲ್ ಧೈರ್ಯ ತೋರಿದೆ. ನಾವು ಲೆಬನಾನ್ ಮತ್ತು ಹಿಜ್ಬುಲ್ ಹೊಡೆತವನ್ನು ಸಹಿಸುವಷ್ಟು ಸಮರ್ಥರಾಗಿದ್ದೇವೆ” ಎಂದು ಸಚಿವ ಸಂಪುಟ ಸಭೆಯಲ್ಲಿ ಹೇಳಿರುವುದಾಗಿ ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ. ಹಿಜ್ಬುಲ್ ಮುಖ್ಯಸ್ಥ ಹಸನ್ ನಸ್ರಲ್ಲಾ, ಶನಿವಾರದ ತನ್ನ ಭಾಷಣದಲ್ಲಿ, ಇಸ್ರೇಲ್ ದೇಶವು ಲೆಬನಾನ್ ಮೇಲೆ ದಾಳಿ ಮಾಡುವ ಧೈರ್ಯ ತೋರಿದರೆ, ಇಸ್ರೇಲ್ ನಾಶ ಮಾಡಲು ಶಿಟ್ಟೆ ಸಂಘಟನೆ ಸಮರ್ಥವಾಗಿದೆ ಎಂದು ಹೇಳಿದ್ದಾನೆ.

Leave a Reply

This site uses Akismet to reduce spam. Learn how your comment data is processed.