ಭಾರತದ ಅಗ್ನಿ -5 ಖಂಡಾಂತರ ಕ್ಷಿಪಣಿ ಮತ್ತು ಪಾಕಿಸ್ತಾನ ಪರೀಕ್ಷೆ ನಡೆಸಿದ ಘಜ್ನವಿ ಕ್ಷಿಪಣಿ ನಡುವಿನ ವ್ಯತಾಸ ತಿಳಿದು ಕೊಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ
ಕಾಶ್ಮೀರ ವಿಚಾರದಲ್ಲಿ ಕಾಲು ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ತೀವ್ರ ಮುಜುಗರಕ್ಕೆ ಒಳಪಟ್ಟರೂ ಯುದ್ಧೋನ್ಮಾದದಲ್ಲಿರುವ ಪಾಕಿಸ್ತಾನ ಬುಧವಾರ ತಡರಾತ್ರಿ ಘಜ್ನವಿ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ  ಪರೀಕ್ಷಾ ಉಡಾವಣೆ  ನಡೆಸಿದೆ.ಇನ್ನು ಪಾಕಿಸ್ತಾನ ಪರೀಕ್ಷೆ ನಡೆಸಿದ ಘಜ್ನವಿ ಕ್ಷಿಪಣಿ ಭೂಮಿಯಿಂದ   290 ಕಿಲೋಮೀಟರ್ ವರೆಗೆ ಸಿಡಿತಲೆಗ ಹೊತ್ತೊಯ್ಯಬಲ್ಲ  ಕ್ಷಿಪಣಿ ಇದಾಗಿದೆ.290 ಕಿ.ಮೀ.ವರೆಗೆ ಅನೇಕ ಬಗೆಯ ಸಿಡಿತಲೆಗಳನ್ನು ತಲುಪಿಸುವ ಸಾಮರ್ಥ್ಯವಿರುವ ಘಜ್ನವಿ ಹೊಂದಿದೆ.ಇನ್ನು ಭಾರತ ಮಾತ್ರ ಪಾಕಿಸ್ತಾನಕ್ಕಿಂತ ೧೭ ಪಟ್ಟು ಹೆಚ್ಚು ಸಮರ್ಥವಿರುವ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಅಣ್ವಸ್ತ್ರ ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಅಗ್ನಿ-5 ಪರೀಕ್ಷೆಯನ್ನು ಡಿಸೆಂಬರ್ ೨೦೧೮ ರಲ್ಲೇ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.ಭೂಮಿಯಿಂದ ಭೂಮಿಗೆ ಚಿಮ್ಮುವ ಈ ಕ್ಷಿಪಣಿ 5 ಸಾವಿರ ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದ್ದು 7 ಮೀಟರ್ ಎತ್ತರ, 2 ಮೀಟರ್ ಅಗಲ ಹೊಂದಿದ್ದು, 1.5 ಟನ್ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

Leave a Reply

This site uses Akismet to reduce spam. Learn how your comment data is processed.