ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧ ವಾಗ್ದಾಳಿ ನಡೆಸುವ ವೇಳೆ ಮೈಕ್ ನಿಂದ ಕರೆಂಟ್ ಶಾಕ್ ತಗುಲಿ ಕೆಲ ಕ್ಷಣ ವಿಚಲಿತರಾದ ಪಾಕ್ ರೈಲ್ವೆ ಸಚಿವ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು ಕಾಶ್ಮೀರದ ವಿಚಾರವಾಗಿ ಭಾರತ ಸರಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಖಂಡಿಸಿ ಕಾಶ್ಮೀರಿಗರ ಪರ ಬೆಂಬಲಕ್ಕೆ ನಿಲ್ಲುವಂತೆ ಇಂದು ಇಮ್ರಾನ್ ಖಾನ್ ಕರೆ ನೀಡಿದ್ದರು. ಮಧ್ಯಾಹ್ನ12 ರಿಂದ 12 :30ವರೆಗೆ ಎಲ್ಲಾ ಪಾಕಿಸ್ತಾನಿಯರು ಮುಂದೆ ಬಂದು ಕಾಶ್ಮೀರಿಗರ ಪರ ಐಕ್ಯತೆ ಪ್ರದರ್ಶಿಸಲು ಕರೆ ನೀಡಲಾಗಿತ್ತು. ಅದೇ ರೀತಿ ಪಾಕಿಸ್ತಾನ ರೈಲ್ವೆ ಸಚಿವ ಶೇಖ್ ರಶೀದ್ ಅವರು ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡುವ ವೇಳೆ ಮೈಕ್ ನಿಂದ ಕರೆಂಟ್ ಶಾಕ್ ತಗುಲಿ ಕೆಲ ಕ್ಷಣ ವಿಚಲಿತರಾದ ಘಟನೆ ನಡೆದಿದೆ .ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವಾಗ ಈ ಘಟನೆ ನಡೆದಿದ್ದು ಈ ಹಿಂದೆ ಶೇಕ್ ರಶೀದ್ ಅವರು ಪಾಕಿಸ್ತಾನದ ಎಲ್ಲ ರೈಲುಗಳನ್ನು ಅರ್ಧಗಂಟೆ ಸ್ಥಗಿತಗೊಳಿಸುವಂತೆ ಕೂಡ ಆದೇಶ ನೀಡಿದ್ದರು. ಘಟನೆ ಸಂಬಂಧಿಸಿ ವಿಡಿಯೋ ನೋಡಿ

Leave a Reply

This site uses Akismet to reduce spam. Learn how your comment data is processed.