ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿಯೇ ಸಿದ್ದ ಎಂದು ಫೀಲ್ಡ್ ಗೆ ಇಳಿದ ಕರ್ನಾಟಕದ ಯುವ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ


2019 ರ ಲೋಕಸಭಾ ಚುನಾವಣೆಯಲ್ಲಿ ಮತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿಯೇ ಸಿದ್ದ ಎಂದು ಹುಬ್ಬಳಿಯ ಯುವ ಪಡೆಯೊಂದು ಫೀಲ್ಡ್ ಗೆ ಇಳಿದು ಬಿಟ್ಟಿದೆ.ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಯುವಕರು ನಮೋ ಮಿಷನ್ 2019 ಎಂಬ ಸಂಘಟನೆಯನ್ನು ಸ್ಥಾಪಿಸಿ ಸಂಘಟನೆಯ ಮೊದಲ ಪೂರ್ವಭಾವಿ ಸಭೆಯನ್ನು ಧರ್ಮಸ್ಥಳದಲ್ಲಿ ಆಯೋಜಿಸಿದ್ದಾರೆ.ಈಗಾಗಲೇ ಈ ತಂಡಕ್ಕೆ ಕರ್ನಾಟಕದ ಪ್ರತಿ ಜಿಲ್ಲೆಯಿಂದಲೂ ಉತ್ತಮ ಸ್ಪಂಧನೆ ದೊರೆತಿದ್ದು .ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು, ಸ್ವಂತ ಖರ್ಚಿನಲ್ಲಿ ಸಂಘಟನೆಯನ್ನು ಮುನ್ನೆಡೆಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎನ್ನುತ್ತಿದ್ದಾರೆ ಸಂಘಟನೆ ಕಾರ್ಯಕರ್ತರು. ಕೇಂದ್ರ ಸರ್ಕಾರದ ಯೋಜನೆಗಳನ್ನು ಬೂತ್ ಮಟ್ಟದಲ್ಲಿ ಪ್ರತಿ ಮನೆ ಮನೆಗೆ ತಲುಪಿಸಿ ಅದರೊಂದಿಗೆ ಚುನಾವಣಾ ಸಂಧರ್ಭದಲ್ಲಿ ಮತದಾನ ಮಾಡುವ ಬಗ್ಗೆ ಜಾಗ್ರತೆ ಮೂಡಿಸುತ್ತಾ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿಯೇ ಸಿದ್ದ ಎನ್ನುತ್ತಾರೆ ನಮೋ ಮಿಷನ್ ಸಂಘಟನೆ ಕಾರ್ಯಕರ್ತರು.

Leave a Reply

This site uses Akismet to reduce spam. Learn how your comment data is processed.