“ಧನ್ಯಶ್ರೀ ಆತ್ಮಹತ್ಯೆ” ಬಲಪಂಥೀಯ ಸಂಘಟನೆಗಳ ಮೇಲೆ ಆರೋಪ ಮಾಡುವ ಮೊದಲು ಈ ಪ್ರಶ್ನೆಗಳಿಗೆ ಉತ್ತರ ಕೊಡುವರು ಯಾರು

ಈ ಸುದ್ದಿಯನ್ನು ಶೇರ್ ಮಾಡಿ

ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಬಿಕಾಂ ವಿದ್ಯಾರ್ಥಿನಿ ಧನ್ಯಶ್ರೀ ಪ್ರಕರಣದ ಆರೋಪವನ್ನು ಬಲಪಂಥೀಯ ಸಂಘಟನೆಗಳ ಮೇಲೆ ಕೂರಿಸುವ ಮೊದಲು ಮಾಧ್ಯಮಗಳು ಮತ್ತು ಪೊಲೀಸ್ ಇಲಾಖೆ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ .

ಧನ್ಯಶ್ರೀ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾದ ವಾಟ್ಸ್ ಅಪ್ ಸಂದೇಶ ಯಾರು ಸ್ರಷ್ಟಿ ಮಾಡಿದರು ? ಅಥವಾ ಧನ್ಯಶ್ರೀ ಮೊಬೈಲ್ ನಿಂದ ಮಾಡಲಾದ ಚಾಟ್ ನ ನೈಜ ಸ್ಕ್ರೀನ್ ಶಾಟ್ ಯೇ? ಧನ್ಯಶ್ರೀ ಗೆ ಮುಸ್ಲಿಂ ಯುವಕ ತನ್ನ ಪ್ರೇಮದ ಬಲೆಗೆ ಬೀಳಿಸಲು ಹೊಂಚು ಹಾಕಿ ವಿಫಲವಾದ ಸಂದರ್ಭ ಈ ಸ್ಕ್ರೀನ್ ಶಾಟ್ ಅನ್ನು ಸ್ರಷ್ಟಿ ಮಾಡಿ ಹಿಂದೂ ಸಂಘಟನೆಗಳ ವಾಟ್ಸ್ ಅಪ್ ಗ್ರೂಪ್ ನಲ್ಲಿ ಹರಿಯಬಿಟ್ಟನೇ ? ಎಂಬ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಯಬೇಕಿದೆ .

ಧನ್ಯಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ಕೇಂದ್ರ ಬಿಂದು ಆಗಿರುವ ಆ ಮುಸ್ಲಿಂ ಯುವಕ ಯಾರು ?,ಆತ್ಮಹತ್ಯೆಗೆ ಆ ಯುವಕನೇ ಮೂಲ ಕಾರಣ ಆದನೇ ?ಎಂಬ ತನಿಖೆ ನಡೆಯ ಬೇಕಿದೆ .

ಧನ್ಯ ಶ್ರೀ ತಂದೆ ನೀಡಿದ ದೂರಿನಲ್ಲಿ ಯಾವುದೇ ಸಂಘಟನೆ ಮತ್ತು ಸಂಘಟನೆಗೆ ಸೇರಿದ ವ್ಯಕ್ತಿಗಳ ಹೆಸರು ಉಲ್ಲೇಖಿಸದೆ ಇರುವಾಗ ಟಿವಿ ಮಾಧ್ಯಮಗಳಲ್ಲಿ ನೇರವಾಗಿ ಧನ್ಯಶ್ರೀ ಆತ್ಮ ಹತ್ಯೆಯಲ್ಲಿ ಬಲಪಂಥೀಯ ಸಂಘಟನೆಯನ್ನು ತುಳುಕು ಹಾಕಲಾಗುತ್ತಿದ್ದು ಯಾಕೆ ?

ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಗೆ ಅನಾಮಧೇಯ ಪತ್ರ ರವಾನಿಸಿ ಆ ವ್ಯಕ್ತಿ ಯಾರು ಪ್ರಕರಣಕ್ಕೂ ಆ ವ್ಯಕ್ತಿಗೂ ಏನು ಸಂಬಂಧ ? ಒಂದು ಅನಾಮಧೇಯ ಪತ್ರದ ಆಧಾರದ ಮೇಲೆ ಪ್ರಕರಣದಲ್ಲಿ ಭಾಗಿಯಾಗದವರ ಮೇಲೆ ಐಪಿಸಿ 306 ಹೇಗೆ ದಾಖಲಿಸಿದರು ?

ಧನ್ಯಶ್ರೀ ಮೃತ ದೇಹದ ಮರಣೋತ್ತರ ಪರೀಕ್ಷೆಯ ವರದಿ ಏನು ಹೇಳುತ್ತದೆ ?ಚಿಕ್ಕಮಂಗಳೂರು ಸಿಂಗಂ ಖ್ಯಾತಿಯ ಜಿಲ್ಲಾ ವರಿಷ್ಠಾಧಿಕಾರಿ ಅಣ್ಣ ಮಲೈ ಅವರು ಈ ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ಕೂಲಂಕುಷವಾಗಿ ತನಿಖೆ ನಡೆಸಲಿ ಎಂಬುವುದು ನಮ್ಮೆಲ್ಲರ ಆಶಯ

Leave a Reply

This site uses Akismet to reduce spam. Learn how your comment data is processed.