ಯೋಗಿ ಎನ್‍ಕೌಂಟರ್ ಎಫೆಕ್ಟ್- ಬೆನ್ನು ಮುರಿದು ದುಡಿಯಲು ಶುರು ಮಾಡಿಬಿಟ್ಟಿದ್ದಾರೆ ರೌಡಿ ಶೀಟರ್ ಗಳು

ಈ ಸುದ್ದಿಯನ್ನು ಶೇರ್ ಮಾಡಿ

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೌಡಿಶೀಟರ್‍ಗಳು ಹಾಗೂ ಕ್ರಿಮಿನಲ್‍ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ ಪರಿಣಾಮ ಎನ್‍ಕೌಂಟರ್‍ಗೆ ಹೆದರಿ ರೌಡಿಗಳು ಈಗ ತಮ್ಮ ಜೀವನವನ್ನ ಬದಲಾಯಿಸಿಕೊಳ್ಳುತ್ತಿದ್ದಾರೆ. ಕೆಲವರು ಸೈಕಲ್ ರಿಪೇರಿ ಅಂಗಡಿ, ಇನ್ನೂ ಕೆಲವರು ಹಣ್ಣಿನ ವ್ಯಾಪಾರ ನಡೆದುತ್ತಿದ್ದರೆ ಮತ್ತೂ ಕೆಲವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

ಲಿಸಾದಿ ಗೇಟ್ ಪೊಲೀಸ್ ಠಾಣೆಯಲ್ಲಿ ಅಖೀಲ್(35) ನ ರೌಡಿಶೀಟ್ ನಂಬರ್ 58ಎ. ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದರ ಜೊತೆಗೆ ಈತನ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ. ಆದ್ರೆ ಇತ್ತೀಚೆಗೆ ಕೆಲವು ತಿಂಗಳಿನಿಂದ ಈತ ತನ್ನ ಮನೆಯ ಬಳಿಯೇ ಪುಟ್ಟದೊಂದು ಸೈಕಲ್ ರಿಪೇರಿ ಅಂಗಡಿ ತೆರೆದಿದ್ದು, ಬೆಳಗ್ಗಿನಿಂದ ಸಂಜೆವರೆಗೆ ಅಂಗಡಿಯಲ್ಲಿ ದುಡಿಯುತ್ತಾನೆ.

Loading...

ತನ್ನ ಏರಿಯಾದಲ್ಲಿ ಕುಖ್ಯಾತ ರೌಡಿಯಾಗಿದ್ದ ಉಮರ್ ದರಜ್ ಎಂಬಾತ ಈಗ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾನೆ. ಕೆಲವು ತಿಂಗಳ ಹಿಂದೆ ಜೀವನ ತುಂಬಾ ಕಷ್ಟಕರವಾಗಿತ್ತು. ನನ್ನ ಜೀವ ಉಳಿಸಿಕೊಳ್ಳಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡುತ್ತಿದ್ದೆ. ಆದ್ರೆ ನನ್ನನ್ನು ಎನ್‍ಕೌಂಟರ್‍ನಲ್ಲಿ ಸಾಯಿಸುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದ ನಂತರ, ಹಣ್ಣಿನ ವ್ಯಾಪಾರ ಮಾಡಲು ನಿರ್ಧರಿಸಿದೆ ಎಂದು ಉಮರ್ ಪತ್ರಿಕೆಯೊಂದಕ್ಕೆ ಹೇಳಿದ್ದಾನೆ.

ಇದೇ ರೀತಿ ಇಮ್ರಾನ್ ಎಂಬಾತ ಈಗ ಗುಜರಿ ಡೀಲರ್ ಆಗಿದ್ದಾನೆ. ರವಿ ಹಾಗೂ ಹೇಮಂತ್ ಆಟೋ ರಿಕ್ಷಾ ಚಾಲಕರಾಗಿದ್ದಾರೆ. ಇನ್ನೂ ಅನೇಕ ರೌಡಿಗಳು ಅಪರಾಧಗಳನ್ನ ಬಿಟ್ಟು ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

Leave a Reply

This site uses Akismet to reduce spam. Learn how your comment data is processed.