ಮೋದಿಯವರೇ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿ, ಇಲ್ಲವೇ ಮುಸಲ್ಮಾನರು ನಿರ್ಮಿಸಲಿದ್ದಾರೆ ಭವ್ಯ ಶ್ರೀರಾಮ ಮಂದಿರ :ಇಮಾಮ್ ಮೊಹಮ್ಮದ್ ಸಲೀಮ್

ಈ ಸುದ್ದಿಯನ್ನು ಶೇರ್ ಮಾಡಿ


ನವದೆಹಲಿ : ದೇಶದಲ್ಲಿ ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣ ಕುರಿತಂತೆ ಬಿಸಿ ಬಿಸಿ ಚರ್ಚೆಯಾಗುತ್ತಿರುವ ನಡುವೆ ಪಠಾಣ್ ಕೋಟ್ ಜಮಾ ಮಸೀದಿಯ ಇಮಾಮ್ ಮೊಹಮ್ಮದ್ ಸಲೀಂ ನೀಡಿದ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ.ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಬೇಕು ಇಲ್ಲವಾದರೆ ದೇಶದಾದ್ಯಂತ ಇರುವ ಮುಸ್ಲಿಮರು ಶ್ರೀರಾಮ ಮಂದಿರ ನಿರ್ಮಾಣ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಮೋದಿ ಸರಕಾರ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದರೆ ಪಠಾಣ್ ಕೋಟ್ ನಿಂದ ಮುಸ್ಲಿಂ ಸಮುದಾಯದ ಹೆಚ್ಚಿನ ಜನರನ್ನು ರಾಮ್ ಲಲ್ಲನ ಕರ ಸೇವೆಗಾಗಿ ಅಯೋಧ್ಯೆಗೆ ಕರೆತರುತ್ತೇನೆ ಎಂದು ಅವರು ಹೇಳಿದ್ದಾರೆ .

ಇಮಾಮ್ ಮೊಹಮ್ಮದ್ ಸಲೀಂ ಇಸ್ಲಾಮಿಕ್ ಚಿಂತಕ ಕೂಡ ಆಗಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು `ದೇಶದ ಪ್ರತಿಯೊಬ್ಬ ಮುಸ್ಲಿಮರಲ್ಲಿ ನಾನು ಆಗ್ರಹ ಮಾಡುತ್ತಿದ್ದೇನೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆದಷ್ಟು ಬೇಗ ಆಗಬೇಕು ಈ ನಿಟ್ಟಿನಲ್ಲಿ ಯಾರೊಬ್ಬ ಮುಸಲ್ಮಾನರು ಈ ಬಗ್ಗೆ ವಿರೋಧ ವ್ಯಕ್ತಪಡಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.ಅಯೋಧ್ಯೆ ಶ್ರೀರಾಮನ ಜನ್ಮಭೂಮಿಯಾಗಿದೆ ಕಾರಣದಿಂದ ಮಂದಿರ ಅಲ್ಲಿಯೇ ನಿರ್ಮಾಣವಾಗಬೇಕು.ರಾಮ ಮಂದಿರ ನಿರ್ಮಾಣ ವಿಚಾರ ಆದಷ್ಟು ಶೀಘ್ರವಾಗಿ ಕೊನೆಗೊಳ್ಳಬೇಕು ಇದರಿಂದ ದೇಶಕ್ಕೆ ಒಳ್ಳೆಯದಾಗಲಿದೆ ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಮಮಂದಿರ ನಿರ್ಮಾಣದ ಚಾಲನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
news source : sudarshannews

Leave a Reply

This site uses Akismet to reduce spam. Learn how your comment data is processed.