ಗರ್ಭಿಣಿ ಹಸುವಿನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಆಂಧ್ರಪ್ರದೇಶದ ಅಮರಾವತಿ ಪ್ರದೇಶದಲ್ಲಿ ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರಕ್ಕೆ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೂರ್ವ ಗೋದಾವರಿ ಜಿಲ್ಲೆಯ ಪಿಥಪುರಂ ಮಂಡಲಂ ಎಂಬಲ್ಲಿ ಬುಚಿಚಾರಾಜು ಎಂಬವರು ಹೈನುಗಾರಿಕೆ ನಡೆಸುತ್ತಿದ್ದು, ಶನಿವಾರ ರಾತ್ರಿ ಅವರದೊಂದು ಆಕಳು ಕೊಟ್ಟಿಗೆಯಿಂದ ನಾಪತ್ತೆಯಾಗಿತ್ತು. ಭಾನುವಾರ ಬೆಳಗ್ಗೆ ಎಂದಿನಂತೆ ಕೊಟ್ಟಿಗೆಗೆ ಬಂದು ನೋಡಿದಾಗ ಕಟ್ಟಿ ಹಾಕಲಾಗಿದ್ದ ಒಂದು ಹಸು ಹಾಗೂ ಒಂದು ಕರು ಮಾತ್ರ ಅಲ್ಲಿದ್ದವು. ಇನ್ನೊಂದು ಹಸು ಅಲ್ಲಿಂದ ನಾಪತ್ತೆಯಾಗಿತ್ತು. ಹಸುವಿಗಾಗಿ ಬಾಚಿಚಾರಾಜು ಊರೆಲ್ಲ ಹುಡುಕಾಟ ನಡೆಸಿದ್ದರು.

ಕೆಲ ಗಂಟೆಗಳ ಬಳಿಕ ಪಕ್ಕದ ಹೊಲದಲ್ಲಿ ಕಟ್ಟಿಹಾಕಿರುವ ಸ್ಥಿತಿಯಲ್ಲಿ ಹಸು ಪತ್ತೆಯಾಗಿದ್ದು, ತೀವ್ರ ಅಸ್ವಸ್ಥವಾಗಿತ್ತು. ಅದರ ಗುಪ್ತಾಂಗದಲ್ಲಿ ರಕ್ತ ಸುರಿಯುತ್ತಿರುವುದನ್ನು ಗಮನಿಸಿದ ಬುಚಿಚಾರಾಜು, ಕೂಡಲೇ ಪಶು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹಸುವನ್ನು ಪರೀಕ್ಷಿಸಿದ ವೈದ್ಯರು, ಅದರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿದ್ದು, ಹೌಹಾರಿ ಹೋದ ಬಾಚಿಚಾರಾಜು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಮುಕರು ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲು ಪ್ರಾಣಿಗಳನ್ನು ಸಹ ಬಳಸಿಕೊಳ್ಳುತ್ತಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.

Leave a Reply

This site uses Akismet to reduce spam. Learn how your comment data is processed.