ಕಿರುಕುಳಕ್ಕೆ ಒಳಗಾದ ಮಹಿಳಾ ಕಾರ್ಪೆರೇಟರ್ ಪರ ನಿಲ್ಲದ ಕಾಂಗ್ರೆಸ್ ? ಪ್ರತಿಭಾ ಕುಳಾಯಿಗೆ ಶೋಕಾಸ್ ನೋಟೀಸ್ ,ಮುಸ್ಲಿಂ ಸಂಘಟನೆಯ ಯುವಕರ ಒತ್ತಡಕ್ಕೆ ಮಣಿದರೆ ಉಸ್ತುವಾರಿ ಸಚಿವ ರಮಾನಾಥ ರೈ ?

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು ಕಾರ್ಪೆರೇಟರ್ ಪ್ರತಿಭಾ ಕುಳಾಯಿ ಅವರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿದ್ದ ಕಾಂಗ್ರೆಸ್ ಮುಖಂಡ ಅಬ್ದುಲ್ ಸತ್ತಾರ್ ಗೆ ಹಿಗ್ಗಾ ಮುಗ್ಗ ಧರ್ಮದೇಟು ನೀಡಿದ್ದ ಪ್ರತಿಭಾ ಕುಳಾಯಿ ಅವರಿಗೆ ಕಾಂಗ್ರೆಸ್ ಶೋಕಾಸ್ ನೋಟೀಸ್ ಅನ್ನು ಜಾರಿ ಮಾಡಿದೆ .ಪ್ರತಿಭಾ ಕುಳಾಯಿ ಅವರು ತಮಗೆ ಆದ ಅನ್ಯಾಯದ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದರು ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದೀರಾ ಎಂದು ಪ್ರತಿಭಾ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ 7 ದಿನದ ಒಳಗೆ ಈ ಬಗ್ಗೆ ಉತ್ತರಿಸಬೇಕೆಂದಿದೆ .

ಪ್ರತಿಭಾ ಕುಳಾಯಿ ಅವರ ಆಪ್ತ ವಲಯದಿಂದ ತಿಳಿದು ಬಂದ ಪ್ರಕಾರ ಕಾಂಗ್ರೆಸ್ ಜಿಲ್ಲಾ ಸಮಿತಿಯ ಶೋಕಾಸ್ ಬಗ್ಗೆ ಪ್ರತಿಭಾ ಅವರು ಅಸಮಧಾನ ವ್ಯಕ್ತಪಡಿಸಿದ್ದು .ಉಸ್ತುವಾರಿ ಸಚಿವ ರಮಾನಾಥ ರೈ ಅವರಲ್ಲಿ ಮುಸ್ಲಿಂ ಸಂಘಟನೆಯ ಕೆಲವರು ಒತ್ತಡ ಹೇರಿದ ಪರಿಣಾಮ ಈ ನೋಟೀಸ್ ಜಾರಿ ಮಾಡಲಾಗಿದೆ ಈ ನೋಟೀಸ್ ಗೆ ಸೂಕ್ತ ಉತ್ತರ ನೀಡಲಿದ್ದಾರೆ ಎನ್ನಲಾಗಿದೆ.

Leave a Reply

This site uses Akismet to reduce spam. Learn how your comment data is processed.