ಪಬ್ ದಾಳಿ ಪ್ರಕರಣ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ ,ಹಿಂದೂ ಸಂಘಟನೆಗಳಿಗೆ ಸಂದ ಜಯ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು 2009ರ ಪಬ್ ದಾಳಿ ಪ್ರಕರಣ ಇತಿಶ್ರೀ ಬಿದ್ದಿದ್ದು, ಎಲ್ಲ 26 ಮಂದಿ ಆರೋಪಿಗಳನ್ನು ಕೋರ್ಟ್ ದೋಷಮುಕ್ತಗೊಳಿಸಿದೆ.ಸುದೀರ್ಘ ವಿಚಾರಣೆ ಬಳಿಕ ಸಾಕ್ಷ್ಯಾಧಾರ ಕೊರತೆಯಿಂದ ದಕ್ಷಿಣ ಕನ್ನಡ 3ನೇ ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದರು.2009, ಜನವರಿ 24ರಂದು ನಡೆದಿದ್ದ ಪಬ್ ದಾಳಿ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿತ್ತು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಪ್ರಸಾದ್ ಅತ್ತಾವರ, ಸುಭಾಸ್ ಪಡೀಲ್, ದಿನಕರ ಶೆಟ್ಟಿ ಸೇರಿ 26 ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 27 ಮಂದಿ ಸಾಕ್ಷ್ಯ ಹೇಳಿದ್ದರು.ತೀರ್ಪು ಪ್ರಕಟಣೆಯ ವೇಳೆ ಖುದ್ದು ಹಾಜರಿದ್ದ ಪ್ರಮೋದ್ ಮುತಾಲಿಕ್ ಇದು ಸತ್ಯಕ್ಕೆ ಮತ್ತು ಹಿಂದೂ ಸಂಘಟನೆಗಳಿಗೆ ಸಂದ ಜಯ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು .

Leave a Reply

This site uses Akismet to reduce spam. Learn how your comment data is processed.