Connect with us

ಕರಾವಳಿ ಸುದ್ಧಿ

ಮೈ ಮುಟ್ಟಲು ಬಂದ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಗೆ ಧರ್ಮದೇಟು ನೀಡಿದ ಪ್ರತಿಭಾ ಕುಳಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು : ಮಂಗಳೂರು ಉತ್ತರ ಶಾಸಕ ಮೊಯಿದಿನ್ ಭಾವ ಅವರ ಮನೆಯಲ್ಲಿ ನಡೆದ ಘಟನೆ ಒಂದರಲ್ಲಿ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಗೆ ಕಾರ್ಪೆರೇಟರ್ ಪ್ರತಿಭಾ ಕುಳಾಯಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಪ್ರತಿಭಾ ಕುಳಾಯಿ ಅವರು ಮೊಯಿದಿನ್ ಭಾವ ಅವರ ಕಚೇರಿಯಲ್ಲಿ ಇದ್ದ ಸಂದರ್ಭ ಅಬ್ದುಲ್ ಸತ್ತಾರ್ ಕಾರ್ಪೆರೇಟರ್ ಮೈ ಮುಟ್ಟಿ ವಿಕ್ರತ ಆನಂದ ಪಡೆಯಲು ಯತ್ನಿಸುತ್ತಿದ್ದ ಸಂದರ್ಭ ರೊಚ್ಚಿಗೆದ್ದ ಪ್ರತಿಭಾ ಕುಳಾಯಿ ಅವರು ಅಬ್ದುಲ್ ಸತ್ತಾರ್ ಗೆ ಶಾಸಕರ ಮುಂದೆಯೇ ಧರ್ಮದೇಟು ನೀಡಿದ್ದಾರೆ ಶಾಸಕರ ಮನೆಯಿಂದ ಕಾಲ್ಕಿತ್ತ ಸತ್ತಾರ್ ಬೆನ್ನು ಬೀಡದೆ ಹೂರ ಬಂದು ಏಟು ನೀಡಿದ ಪ್ರತಿಭಾ ಕುಳಾಯಿ ಅವರಿಗೆ ಕೆಲ ಯುವಕರು ಕೂಡ ಸಾಥ್ ನೀಡಿದ್ದಾರೆ ಎಂದು ವರದಿ ಆಗಿದೆ.ಅಬ್ದುಲ್ ಸತ್ತಾರ್ ಮೇಲೆ ಈ ಹಿಂದೆ ಕೂಡ ಮಹಿಳೆಯರ ಜೊತೆ ಅಸಭ್ಯ ರೀತಿ ವರ್ತಿಸುತ್ತಿದ್ದ ಎಂಬ ಆರೋಪವು ಈತನ ಮೇಲೆ ಇದೆ .ಸದ್ಯ ಘಟನೆ ಸಂಬಂಧ ಯಾವುದೇ ದೂರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲು ಆಗಿಲ್ಲ ಎಂದು ತಿಳಿದು ಬಂದಿದೆ

Click to comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

More in ಕರಾವಳಿ ಸುದ್ಧಿ

To Top