Connect with us

ಕರಾವಳಿ ಸುದ್ಧಿ

ಹಾಡಿಯೊಂದರಲ್ಲಿ ಮತಾಂದ ಮುಸ್ಲಿಂ ಯುವಕನೊಂದಿಗೆ ಸಿಕ್ಕಿಬಿದ್ದ ಹಿಂದೂ ಯುವತಿ,ಪ್ರಕರಣ ದಾಖಲಿಸಿಕೊಳ್ಳದೆ ಕೈತೊಳೆದು ಕೊಂಡ ಪಡುಬಿದ್ರೆ ಪೊಲೀಸರು !

ಈ ಸುದ್ದಿಯನ್ನು ಶೇರ್ ಮಾಡಿ

ಪಡುಬಿದ್ರಿ ಸುಜ್ಲಾನ್ ಕಾಲನಿಯ ಪಕ್ಕದ ಹಾಡಿಯೊಂದರಲ್ಲಿ ಮತಾಂದ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯೊಬ್ಬಳು ಹಿಂದೂ ಸಂಘಟನೆಯ ಸದಸ್ಯರ ಕೈಗೆ ಸಿಕ್ಕಿಬಿದ್ದಿದ್ದು, ತಕ್ಷಣ ಅವರನ್ನು ಪಡುಬಿದ್ರಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂಬುದಾಗಿ ಹಿಂದೂ ಸಂಘಟನೆಯ ಮುಖಂಡ ರಾಜೇಶ್ ಕೋಟ್ಯಾನ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ, “ಹಾಡಿಯಲ್ಲಿ ಕಂಚಿನಡ್ಕ ನಿವಾಸಿ ಹನೀಫ್ ಎಂಬಾತನೊಂದಿಗೆ ಶಿಕ್ಷಣ ಸಂಸ್ಥೆಯೊಂದರ ಯುನಿಫಾರಂ ಹಾಕಿಕೊಂಡಿರುವ ಯುವತಿಯೊಬ್ಬಳು ಇದ್ದಾಳೆ ಎಂಬ ಮಾಹಿತಿ ಸಿಕ್ಕ ತಕ್ಷಣ ಅಲ್ಲಿಗೆ ತೆರಳಿ ಅವರನ್ನು ರೆಡ್ ಹ್ಯಾಂಡಾಗಿ ಹಿಡಿಯಲಾಗಿದೆ. ತಕ್ಷಣ ಪಡುಬಿದ್ರಿ ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ದ್ವಿಚಕ್ರ ವಾಹನ ಮೂಲಕ ಬಂದ ಪೊಲೀಸರಿಬ್ಬರ ಒತ್ತಾಯದ ಮೇರೆಗೆ ಆ ಜೋಡಿಯನ್ನು ಠಾಣೆಗೆ ಕರೆದೊಯ್ಯಲು ನಾವೇ ಅಟೋರಿಕ್ಷಾ ಮಾಡಿಕೊಡಲಾಯಿತು” ಎಂದು ತಿಳಿಸಿದ್ದಾರೆ.

“ಆ ಬಳಿಕ ಆತನ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ಸಂಘಟನೆಯ ಸದಸ್ಯರು ಹೋದಾಗ ಅವರಿಗೆ ಹೆದರಿಸಿದ ಪೊಲೀಸರು `ನೀವು ಠಾಣೆಗೆ ಬರಬೇಡಿ. ಬಂದರೆ ನಿಮ್ಮ ವಿರುದ್ಧವೇ ಕೇಸು ದಾಖಲಾಗುವ ಸಾಧ್ಯತೆ ಇದೆ’ ಎಂದಿದ್ದು ಮಾತ್ರವಲ್ಲ. ಕೆಲವೇ ಹೊತ್ತಿನಲ್ಲಿ ಆ ಜೋಡಿಯನ್ನು ಬಿಟ್ಟಿದ್ದಾರೆ. ಈ ಬಗ್ಗೆ ಸಂಘಟನೆಯ ಸದಸ್ಯರು ಠಾಣೆಗೆ ಕರೆ ಮಾಡಿ ಕೇಳಿದರೆ ಅಂಥಹ ಘಟನೆ ನಡೆದೇ ಇಲ್ಲ ಎನ್ನುವ ಮೂಲಕ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಈ ಬಗ್ಗೆ ಉಡುಪಿ ಎಸ್ಪಿಯವರಿಗೆ ದೂರು ನೀಡಲಾಗಿದೆ” ಎಂದು ತಿಳಿಸಿದ್ದಾರೆ.
-ಕರಾವಳಿ ಅಲೆ

Click to comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

More in ಕರಾವಳಿ ಸುದ್ಧಿ

To Top