ಚೀನಾದಲ್ಲಿ ಮುಸ್ಲಿಮರಿಗೆ ನಿರ್ಬಂಧ ಹೇರಿದ ಕಮ್ಯುನಿಸ್ಟ್ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ


ಚೀನಾದಲ್ಲಿ ಮುಸ್ಲಿಮರ ಧಾರ್ಮಿಕ ಚಟುವಟಿಕೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಮ್ಯುನಿಸ್ಟ್ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಮುಸ್ಲಿಮರ ಪಾಲಿನ ಲಿಟಲ್ ಮೆಕ್ಕಾ ಎಂದೇ ಖ್ಯಾತಿ ಗಳಿಸಿರುವ ಲಿನ್ ಕ್ಸಿಯಾ ಪ್ರಾಂತ್ಯದಲ್ಲಿ ಮಕ್ಕಳು ಧಾರ್ಮಿಕ ಶಿಕ್ಷಣವನ್ನು ಕಠಿಣ ನಿರ್ಬಂಧಕ್ಕೆ ಒಳಪಡಿಸಲಾಗಿದೆ.ಕಮ್ಯುನಿಸ್ಟ್ ಸರ್ಕಾರದ ಈ ನಿರ್ಧಾರ ಮುಸ್ಲಿಂ ಮೌಲ್ವಿಗಳನ್ನು ಆತಂಕಕ್ಕೆ ಸಿಲುಕಿಸಿದಂತಾಗಿದೆ. ದೇಶದ ಮುಸ್ಲಿಂ ಸಮುದಾಯದ ಪೈಕಿ ಅತಿ ದೊಡ್ಡ ಪಂಗಡ ಎನಿಸಿರುವ ಹುಯಿ ಮುಸ್ಲಿಮರು ನಿರ್ದಿಷ್ಟ ಗುರಿಯಾಗಿಸಿಕೊಂಡು ಆಡಳಿತಾರೂಢ ಕಮಿಷ್ ಪಕ್ಷ ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರ ತೆಗೆದುಕೊಂಡ ಹಲವು ಕ್ರಮಗಳ ಪೈಕಿ ಹದಿನಾರು ವರ್ಷದ ಒಳಗಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವಂತಿಲ್ಲ,ಪ್ರಾರ್ಥನೆಯ ಹೆಸರಲ್ಲಿ ಮೈಕ್ ಸದ್ದು ಮಾಡುವಂತಿಲ್ಲ, ಮಸೀದಿಗಳಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಹದಿನಾರು ಮೀರುವಂತಿಲ್ಲ,ಹೊಸ ಇಮಾಮರಿಗೆ ನೀಡುವ ಪ್ರಮಾಣ ಮತಗಳ ಸಂಖ್ಯೆಗೆ ಮಿತಿ ಇರಬೇಕು ಎನ್ನುವ ಕಟ್ಟಳೆಗಳನ್ನು ಹೇರಿ ಲಿನ್ ಪ್ರಾಂತೀಯ ಗವರ್ನರ್ ಆದೇಶ ಹೊರಡಿಸಿದ್ದಾರೆ .

Leave a Reply

This site uses Akismet to reduce spam. Learn how your comment data is processed.